ಶುಕ್ರವಾರ, ಜುಲೈ 30, 2021
26 °C

₹ 6,768.85 ಕೋಟಿ ವೆಚ್ಚದ ಜಲ್‌ ಜೀವನ್‌ ಮಿಷನ್‌ ಯೋಜನೆಗಳಿಗೆ ಸಂಪುಟ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲ್‌ಜೀವನ್‌ ಮಿಷನ್‌ ಬಹುಗ್ರಾಮ ಯೋಜನೆಯಡಿ ನಾಲ್ಕು ಜಿಲ್ಲೆಗಳಲ್ಲಿ ₹6,768.85 ಕೋಟಿ ವೆಚ್ಚದ ಯೋಜನೆಗಳಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ನಬಾರ್ಡ್‌ನ ಮೂಲ ಸೌಕರ್ಯ ಅಭಿವೃದ್ಧಿ ನೆರವು ಯೋಜನೆಯಡಿ ರಾಯಚೂರು ಜಿಲ್ಲೆಗೆ ₹1,988.01, ವಿಜಯಪುರ ಜಿಲ್ಲೆ ಯೋಜನೆ– 1 ರ ಅಡಿ ₹1,431.48, ವಿಜಯಪುರ ಜಿಲ್ಲೆ ಯೋಜನೆ– 2 ರ ಅಡಿ ₹954.51, ಮಂಡ್ಯ ಜಿಲ್ಲೆಯ ಮೂರು ತಾಲ್ಲೂಕುಗಳಿಗೆ ₹690.36 ಕೋಟಿ, ಧಾರವಾಡ ಜಿಲ್ಲೆಯ ಯೋಜನೆಗೆ ₹1,032.44 ಕೋಟಿ.

ನಬಾರ್ಡ್‌ನ ಆರ್‌ಐಡಿಎಫ್‌ ಯೋಜನೆಯಡಿ ಹೊಳಲ್ಕೆರೆ ಯೋಜನೆಗೆ  ₹276 ಕೋಟಿ, ಬೈಂದೂರು ಯೋಜನೆಗೆ ₹396 ಕೋಟಿ. ಇವೆರಡೂ ಯೋಜನೆಗಳಿಗೆ ₹6,768.85 ಕೋಟಿಗೆ ವೆಚ್ಚವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು