ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸಿಗೆ ಸಿಎಂ ಹುದ್ದೆ: ನ್ಯಾಯಾಂಗ ತನಿಖೆಗೆ ಒಪ್ಪಿಸಲು ಕಾಂಗ್ರೆಸ್‌ ಒತ್ತಾಯ

ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಗೃಹ ಸಚಿವರು ಕರ್ನಾಟಕಕ್ಕೆ ಬಂದಿದ್ದು ಸಿಎಂ ಹುದ್ದೆ ವ್ಯವಹಾರಕ್ಕಾಗಿಯೇ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯನ್ನು ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಬೆಲೆ ಏರಿಕೆಯ ಬಿಸಿ ಬಿಜೆಪಿಯ ಸಿಎಂ ಆಕಾಂಕ್ಷಿಗಳಿಗೂ ತಟ್ಟಿದೆ. ₹2,500 ಕೋಟಿ ಅಂದ್ರೆ ಸುಮ್ಮನೇ ಮಾತೇ? ಸಚಿವ ಅಶ್ವತ್ಥನಾರಾಯಣ ಅವರು ಸಿಎಂ ಹುದ್ದೆಗಾಗಿ ₹2,500 ಸಾವಿರ ಕೋಟಿ ಹೊಂದಿಸಲು ಪಿಎಸ್‌ಐ ಹುದ್ದೆಗಳ ಮಾರಾಟಕ್ಕೆ ಇಳಿದಿದ್ದರೇ? ಮೊನ್ನೆ ಕೇಂದ್ರ ಗೃಹಸಚಿವರು ಬಂದಿದ್ದು ಸಿಎಂ ಹುದ್ದೆ ವ್ಯವಹಾರಕ್ಕಾಗಿಯೇ’ ಎಂದು ಪ್ರಶ್ನಿಸಿದೆ.

‘ಬಿಜೆಪಿ ಶಾಸಕ ಯತ್ನಾಳ್ ಅವರ ₹2,500 ಕೋಟಿಯ ಸಂಗತಿ ಅತ್ಯಂತ ಗಂಭೀರವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಎಂ ಬೊಮ್ಮಾಯಿ ನಿರಾಕರಿಸಿದ್ದಾರೆ ಎಂದರೆ ಸತ್ಯ ಒಪ್ಪಲು ಭಯವಿರುವಂತಿದೆ. ಸಿಎಂ ಹುದ್ದೆ ಮಾರಾಟದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು, ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರನ್ನು ವಿಚಾರಣೆಗೊಳಪಡಿಸಬೇಕು. ಬೊಮ್ಮಾಯಿ ಅವರೇ, ತಾವು ಸಿದ್ದವೇ' ಎಂದು ಕಾಂಗ್ರೆಸ್‌ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT