ಶನಿವಾರ, ಸೆಪ್ಟೆಂಬರ್ 18, 2021
24 °C

Karnataka Covid-19 Update: ರಾಜ್ಯದಲ್ಲಿ ನಾಲ್ಕು ತಿಂಗಳಲ್ಲಿ ಕನಿಷ್ಠ ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕಿತರಲ್ಲಿ 19 ಮಂದಿ ಮೃತಪಟ್ಟಿರುವುದು ಬುಧವಾರ ದೃಢಪಟ್ಟಿದೆ. ಇವು ನಾಲ್ಕು ತಿಂಗಳ ಅವಧಿಯಲ್ಲಿ ವರದಿಯಾದ ಕನಿಷ್ಠ ಮರಣ ಪ್ರಕರಣಗಳು.

ರಾಜ್ಯದಲ್ಲಿ ಏಪ್ರಿಲ್ ಮೊದಲನೇ ವಾರದ ಬಳಿಕ ಮರಣ ಪ್ರಕರಣಗಳ ಸಂಖ್ಯೆ ಏರಿಕೆ ಕಂಡು, ಬಳಿಕ 500ರ ಗಡಿ ತಲುಪಿತ್ತು. ಕಳೆದೊಂದು ತಿಂಗಳಿನಿಂದ ಮರಣ ಪ್ರಕರಣಗಳ ಸಂಖ್ಯೆ ಕೂಡ ಇಳಿಕೆಯಾಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ದೃಢ ಪಟ್ಟಿವೆ. ಮರಣ ಪ್ರಮಾಣ ದರವು ಶೇ 1.24ರಷ್ಟು ವರದಿಯಾಗಿದೆ.ದಕ್ಷಿಣ ಕನ್ನಡದಲ್ಲಿ 5, ಬೆಂಗಳೂರಿನಲ್ಲಿ
3, ಉಡುಪಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಇಬ್ಬರು ಸಾವಿಗೀಡಾಗಿರುವುದು ದೃಢಪಟ್ಟಿದೆ. ಉಳಿದ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 36,456ಕ್ಕೆ ತಲುಪಿದೆ.

ಇದನ್ನೂ ಓದಿ: ಸಂಪಾದಕೀಯ: ಶಾಲೆಗಳು ಬಾಗಿಲು ತೆರೆಯಲಿನಿರಂತರ ಕಲಿಕೆ ಅಬಾಧಿತವಾಗಲಿ | Prajavani

ರಾಜ್ಯದಲ್ಲಿ ಹೊಸದಾಗಿ 1,531 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 29 ಲಕ್ಷದತ್ತ (28.99 ಲಕ್ಷ) ದಾಪುಗಾಲು ಇರಿಸಿದೆ. ಒಂದು ದಿನದ ಅವಧಿಯಲ್ಲಿ 1.48 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಶೇ 1.03ರಷ್ಟು ಸೋಂಕು ದೃಢ ಪ್ರಮಾಣ ವರದಿಯಾಗಿದೆ.

ಬೆಂಗಳೂರಿನಲ್ಲಿ 376, ದಕ್ಷಿಣ ಕನ್ನಡದಲ್ಲಿ 337 ಹಾಗೂ ಉಡುಪಿಯಲ್ಲಿ 109 ಮಂದಿ ಕೋವಿಡ್ ಪೀಡಿತರಾಗಿ
ದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ‍ಪ್ರಕರಣಗಳು 100ರ ಗಡಿಯೊಳಗೆ ವರದಿಯಾಗಿವೆ. 15 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ ಹಾಗೂ 9 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ. ರಾಮ ನಗರ, ಕೊಪ್ಪಳ ಹಾಗೂ ಗದಗದಲ್ಲಿ ಹೊಸದಾಗಿ ಪ್ರಕರಣ ವರದಿಯಾಗಿಲ್ಲ.

ಪೀಡಿತರಲ್ಲಿ 1,430 ಮಂದಿಗೆ ಕಾಯಿಲೆ ವಾಸಿಯಾಗಿದೆ. ಗುಣಮುಖರಾದ ವರ ಒಟ್ಟು ಸಂಖ್ಯೆ 28.40 ಲಕ್ಷ ದಾಟಿದೆ. 22,569 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು