ಮಂಗಳವಾರ, ಮೇ 11, 2021
26 °C

ಲಲಿತಾ ನಾಯ್ಕ್‌ಗೆ ಕೊಲೆ ಬೆದರಿಕೆ ಆರೋಪ: ಕ್ರಮ ಕೈಗೊಳ್ಳುವೆವು ಎಂದ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಲೇಖಕಿ ಬಿ.ಟಿ.ಲಲಿತಾ ನಾಯ್ಕ್‌, ಶಿವರಾಜ್‌ಕುಮಾರ್ ಹಾಗೂ ಇತರ ಪ್ರಮುಖರಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

‘ಈ ಸಂಬಂಧ ದೂರು ದಾಖಲಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಹಂತಕರು ಮೇ 1ಕ್ಕೆ ನನಗೆ ಮುಹೂರ್ತ ಇಟ್ಟಿದ್ದಾರಂತೆ. ಅದೇ ದಿನ ನಟ ಶಿವರಾಜ್‌ಕುಮಾರ್‌, ಪಬ್ಲಿಕ್‌ ಟಿವಿ ಸಂಪಾದಕ ಎಚ್‌.ಆರ್‌.ರಂಗನಾಥ್‌ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹತ್ಯೆ ಮಾಡುತ್ತಾರಂತೆ. ಈ ಬಗ್ಗೆ ಕರೀಂ ಚಳ್ಳಕೆರೆ ಎಂಬ ವ್ಯಕ್ತಿ ನನಗೆ ಪತ್ರ ಬರೆದಿದ್ದಾರೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದೇನೆ. ಅವರು ಭದ್ರತೆ ಒದಗಿಸಿದ್ದಾರೆ’ ಎಂದು ಲೇಖಕಿ ಬಿ.ಟಿ.ಲಲಿತಾ ನಾಯ್ಕ್‌ ಹೇಳಿದ್ದರು.

ಓದಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು