ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಪದವೀಧರರ ಕ್ಷೇತ್ರ: ಫಲಿತಾಂಶ ಪ್ರಕಟವಾಗುವವರೆಗೂ ಇದ್ದ ಅಭ್ಯರ್ಥಿಗಳು

Last Updated 16 ಜೂನ್ 2022, 8:06 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಫಲಿತಾಂಶಗೊಳ್ಳುವವರೆಗೆ ಕೆಲವೇ ಅಭ್ಯರ್ಥಿಗಳು ಮಹಾರಾಣಿ ವಾಣಿಜ್ಯ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿದ್ದರು.

ಬಿಜೆಪಿಯ ಮೈ.ವಿ.‌ರವಿಶಂಕರ್, ಪಕ್ಷೇತರ ಅಭ್ಯರ್ಥಿಗಳಾದ ಪ್ರಸನ್ನ ಎನ್. ಗೌಡ, ಎನ್.ಎಸ್. ವಿನಯ್ ಹಾಗೂ ಡಾ.ಬಿ.ಎಚ್. ಚನ್ನಕೇಶವ ಮೂರ್ತಿ ಕೇಂದ್ರದಲ್ಲಿ ಹಾಜರಿದ್ದು, ಗಮನಸೆಳೆದರು. ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಬುಧವಾರ ತಡರಾತ್ರಿವರೆಗೂ ಇದ್ದರು; ಗುರುವಾರ ಮುಂಜಾನೆಯೇ ಬಂದಿದ್ದರು.

ರವಿಶಂಕರ್ ಪಕ್ಷದ ಮುಖಂಡರೊಂದಿಗೆ ಆಗಾಗ ಚರ್ಚೆ ನಡೆಸುತ್ತಾ, 2ನೇ ಪ್ರಾಶಸ್ತ್ಯದ ಮತಗಳ ನಿರೀಕ್ಷೆ ಹೊತ್ತು ಕುಳಿತಿದ್ದರು. ಅವರಿಗೆ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಎಸ್.‌ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿಗಳಾದ ಸೋಮಸುಂದರ್, ವಾಣೀಶ್ ಕುಮಾರ್, ಮುಖಂಡ ಎಸ್.ಟಿ. ಮಹೇಂದ್ರ ಸಾಥ್ ಮೊದಲಾದವರು ನೀಡಿದರು.

29 ತಾಸು ನಿರಂತರವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ, ಸಿಬ್ಬಂದಿ

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಎಣಿಕೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರವಾಗಿ 29 ತಾಸು ಕಾರ್ಯನಿರ್ವಹಿಸಿದರು.

ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ. ಪ್ರಕಾಶ್, ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ರೂಪಶ್ರೀ, ಶಿವರಾಜ್, ಕ್ಷೇತ್ರದ ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ಅಶ್ವಥಿ ಗೌತಮ್, ಗಿರೀಶ್, ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ, ಕಾತ್ಯಾಯಿನಿ, ವಿ.ಆರ್. ಶೈಲಜಾ, ಕವಿತಾ ರಾಜಾರಾಂ, ಉಪ ವಿಭಾಗಾಧಿಕಾರಿಗಳಾದ ಶಿವಾನಂದಮೂರ್ತಿ, ಕಮಲಾಬಾಯಿ, ಮುಡಾ ಜಿ.ಟಿ. ದಿನೇಶ್‌ಕುಮಾರ್, ತಹಶೀಲ್ದಾರ್‌ಗಳು, ಶಿರಸ್ತೇದಾರರು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಪೊಲೀಸ್ ‌ಬಂದೋಬಸ್ತ್ ಕೂಡ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT