ಕರ್ನಾಟಕ ನಾಟಕ ಅಕಾಡೆಮಿ: ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು 2019ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನಿಸಿದೆ.
2019ರ ಜನವರಿಯಿಂದ ಡಿಸೆಂಬರ್ ಅಂತ್ಯದೊಳಗೆ ಮುದ್ರಣವಾದ ಮೊದಲ ಪ್ರಕಟಣೆಗಳನ್ನು ಪರಿಗಣಿಸಲಾಗುತ್ತದೆ. ಕೃತಿಗಳು ಸಂಶೋಧನಾ ಪ್ರಬಂಧ ಹಾಗೂ ನಾಟಕವಾಗಿರಬಾರದು. ರಂಗಸಂಬಂಧಿ ವಸ್ತುವುಳ್ಳದ್ದಾಗಿರಬೇಕು. ಕೃತಿಯು ಕನಿಷ್ಠ 60 ಪುಟಗಳನ್ನು ಹೊಂದಿರಬೇಕು. ಮರುಮುದ್ರಣದ ಪುಸ್ತಕಗಳನ್ನು ಪರಿಗಣಿಸುವುದಿಲ್ಲ ಎಂದು ಅಕಾಡೆಮಿ ತಿಳಿಸಿದೆ.
ಆಸಕ್ತ ಲೇಖಕರು ತಮ್ಮ ಹೆಸರು, ವಿಳಾಸ, ಪುಸ್ತಕ ಪ್ರಕಟಣೆ ವರ್ಷ ಸೇರಿದಂತೆ ವಿವಿಧ ಮಾಹಿತಿಗಳನ್ನು ಒಳಗೊಂಡ ಅರ್ಜಿಯ ಪ್ರತಿ ಹಾಗೂ ಪುಸ್ತಕದ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು–560002 ಈ ವಿಳಾಸಕ್ಕೆ ಜ.4ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.