ಶುಕ್ರವಾರ, ಜುಲೈ 1, 2022
24 °C

ಪಕ್ಷ ಸಂಘಟನೆ ಕಡೆಗೆ ನಿಖಿಲ್‌: ಯುವ, ವಿದ್ಯಾರ್ಥಿ ಜನತಾ ದಳ ಸಭೆ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

nikhil kumaraswamy

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪುತ್ರ, ಯುವ ಜನತಾ ದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಕ್ಷ ಸಂಘಟನೆ ಕಡೆ ಮುಖಮಾಡಿದ್ದಾರೆ.

ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಯುವ ಜನತಾ ದಳ (ಜಾ) ಮತ್ತು ವಿದ್ಯಾರ್ಥಿ ಜನತಾ ದಳ (ಜಾ) ಸಭೆಯನ್ನು ಸೋಮವಾರ ನಿಗದಿಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ರಾಜ್ಯದಲ್ಲಿ ಜನತಾದ ದಳ (ಜಾತ್ಯತೀತ) ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಯುವ ಜನತಾ ದಳ (ಜಾತ್ಯತೀತ) ಮತ್ತು ವಿದ್ಯಾರ್ಥಿ ಜನತಾ ದಳ (ಜಾತ್ಯತೀತ) ವಿಭಾಗದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಕಾರ್ಯಕಾರಿ‌ ಸಮಿತಿಗಳ ಸದಸ್ಯರ ಸಭೆಯನ್ನು ದಿನಾಂಕ 04-01-2021 ರ ಸೋಮವಾರ ಪಕ್ಷದ ಕೇಂದ್ರ‌ಕಚೇರಿ ಜೆಪಿ ಭವನದಲ್ಲಿ ಆಯೋಜಿಸಲಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು