ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನ್‌ ನಾಯಕರು ತೆಪ್ಪಗಿದ್ದರೆ ಸರಿ: ಕಾಂಗ್ರೆಸ್‌ ವಿರುದ್ಧ ಕುಮಾರಸ್ವಾಮಿ ಟ್ವೀಟ್

Last Updated 26 ಮಾರ್ಚ್ 2021, 15:00 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಆಯ್ಕೆ, ನಿರ್ಧಾರಗಳ ಬಗ್ಗೆ ಮಾತನಾಡುವುದನ್ನು ಕಾಂಗ್ರೆಸ್‌ನ ಮಹಾನ್‌ ನಾಯಕರು ನಿಲ್ಲಿಸಿದರೆ ಉತ್ತಮ. ಇಲ್ಲವಾದಲ್ಲಿ ಜಾತ್ಯತೀತವಾದಿ ಮುಖವಾಡ ಧರಿಸಿರುವ ಅವರ ಕೋಮುವಾದಿ ಮುಖವನ್ನು ಬಯಲು ಮಾಡಬೇಕಾಗುತ್ತದೆ. ಶತಮಾನಗಳಿಂದ ವೀರನಾಗಿ ಮಲಗಿದ್ದ ಟಿಪ್ಪು ಸುಲ್ತಾನನ್ನು ದೇಶದ್ರೋಹಿಯನ್ನಾಗಿ ಮಾಡಿದ ಮಹಾನ್‌ ನಾಯಕರು ತೆಪ್ಪಗಿದ್ದರೆ ಸರಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ... ಅತ್ಯಂತ ಹಳೆಯ ಪಕ್ಷ ಈಗ ತುಕ್ಕು ಹಿಡಿದಿದೆ: ಕಾಂಗ್ರೆಸ್‌–ಬಿಜೆಪಿ ಟ್ವೀಟ್‌ ಸಮರ

ಸರಣಿ ಟ್ವೀಟ್‌ ಮಾಡಿರುವ ಅವರು, ‘ಬಸವಕಲ್ಯಾಣದಲ್ಲಿ ಜೆಡಿಎಸ್‌ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು 'ಮಹಾನ್‌ನಾಯಕ'ರು ಹೇಳಿದ್ದಾರೆ. ಪ್ರತಿಯೊಂದಕ್ಕೂ ಒಳ ಒಪ್ಪಂದ, ಒಳಸಂಚು ಮಾಡಿದವರಿಗಷ್ಟೇ ಒಳ ಒಪ್ಪಂದದ ಕನವರಿಕೆ. ಆಪರೇಷನ್‌ ಕಮಲದಲ್ಲಿ, ಮೈತ್ರಿ ಸರ್ಕಾರ ಉರುಳಿದ್ದರಲ್ಲಿ ಅಂಥ ಒಳಒಪ್ಪಂದಗಳು ಈಗಾಗಲೇ ಬಯಲಾಗಿವೆ’ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

‘ಮಂಗಳೂರಿನಲ್ಲಿ ಸಿಎಎ ಪ್ರತಿಭಟನೆ ವೇಳೆ ಹೆಣಗಳು ಬಿದ್ದು, ಅಲ್ಪಸಂಖ್ಯಾತರು ಆತಂಕದಲ್ಲಿದ್ದಾಗ ಕಾಂಗ್ರೆಸ್‌ ನಾಯಕರು ಬಿಲ ಸೇರಿದ್ದರು. ಅಂದು ಮುಸ್ಲಿಮರ ಬೆಂಬಲಕ್ಕೆ ನಿಂತಿದ್ದು ಜೆಡಿಎಸ್‌. ಇಂದು ಬಸವಕಲ್ಯಾಣದಲ್ಲಿ ನಾವು ಮುಸ್ಲಿಂ ಅಭ್ಯರ್ಥಿಯನ್ನು ಹಾಕುತ್ತಲೇ ಕಾಂಗ್ರೆಸ್‌ ತಾನು ಮುಸ್ಲಿಮರ ರಕ್ಷಕ ಎಂದು ಎದೆತಟ್ಟಿಕೊಂಡು ಮುಂದೆ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT