ಮಂಗಳವಾರ, ಸೆಪ್ಟೆಂಬರ್ 21, 2021
21 °C

ಸಚಿವ ಸಂಪುಟ ರಚನೆ: ಮುಖ್ಯಮಂತ್ರಿ ಬೊಮ್ಮಾಯಿ ಭೇಟಿಗೆ ಸಚಿವಾಕಾಂಕ್ಷಿಗಳ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೆಹಲಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಪಸ್ ಆಗುತ್ತಿದ್ದಂತೆ, ಅವರ ಭೇಟಿಗೆ ಸಚಿವ ಸ್ಥಾನ ಆಕಾಂಕ್ಷಿಗಳು ಬರುತ್ತಿದ್ದಾರೆ.

ಆರ್.ಟಿ.‌ ನಗರದಲ್ಲಿರುವ ಬೊಮ್ಮಾಯಿ ಅವರ ಮನೆಗೆ ದೇವದುರ್ಗದ ಶಾಸಕ ಶಿವನಗೌಡ ನಾಯಕ, ಅಥಣಿ ಶಾಸಕ ಮಹೇಶ್ ಕುಮಟಹಳ್ಳಿ ಅವರು ಭಾನುವಾರ ಬೆಳಿಗ್ಗೆಯೇ ಭೇಟಿ ನೀಡಿದರು.

ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್. ಆರ್. ಸಂತೋಷ್ ಕೂಡಾ ಬೊಮ್ಮಾಯಿ‌ ಅವರನ್ನು ಭೇಟಿ ಮಾಡಿದರು. ಸಂತೋಷ್ ಮಾತನಾಡಿ, ‘ನೂತನ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದೆ’ ಎಂದರು.

ಮಾಜಿ ಸಚಿವರಾದ ಬಿ.ಸಿ. ಪಾಟೀಲ, ವಿ. ಸೋಮಣ್ಣ ಕೂಡಾ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಬೊಮ್ಮಾಯಿ‌ ಅವರನ್ನು ವಿನಯ್ ಗುರೂಜಿ ಭೇಟಿ ಮಾಡಿದರು. ಬಳಿಕ‌ ಮಾತನಾಡಿದ ವಿನಯ್ ಗುರೂಜಿ, ‘ಶುಭ ಹಾರೈಸಲು ಬಂದಿದ್ದೆ ಅಷ್ಟೇ. ಅವರು ಮುಖ್ಯಮಂತ್ರಿ ಆಗಿರುವುದು ಖುಷಿ ನೀಡಿದೆ. ಅವರು ಈ ಹಿಂದೆ ಗೃಹ ಸಚಿವ ಆಗಿದ್ದರು. ಹೀಗಾಗಿ ಮುಖ್ಯಮಂತ್ರಿ ಸ್ಥಾನ ನಿಭಾಯಿಸುವುದು ಅವರಿಗೆ ಕಷ್ಟ ಆಗಲ್ಲ’ ಎಂದರು.

ಬೆಳಿಗ್ಗೆ ಯಡಿಯೂರಪ್ಪ ಅವರನ್ನು ಕಾವೇರಿಯಲ್ಲಿ ಭೇಟಿ ಮಾಡಿದ ಬೊಮ್ಮಾಯಿ, ಹೈಕಮಾಂಡ್ ನಾಯಕರ ಜೊತೆ ಸಮಾಲೋಚನೆ ನಡೆಸಿದ ಬಗ್ಗೆ  ಸಮಾಲೋಚನೆ ನಡೆಸಿದರು.

ಇದನ್ನೂ ಓದಿ... ವರಿಷ್ಠರಿಂದ ಮುಖ್ಯಮಂತ್ರಿಯೊಂದಿಗೆ ಇನ್ನೊಮ್ಮೆ ಸಮಾಲೋಚನೆ ಬಳಿಕ ಸಂಪುಟ ವಿಸ್ತರಣೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು