ಶುಕ್ರವಾರ, ಫೆಬ್ರವರಿ 3, 2023
24 °C

ಭ್ರಷ್ಟಾಚಾರ ಆರೋಪ: ಕಮಿಷನ್ ಪಡೆದು ಕಣ್ಮುಚ್ಚಿ ಕುಳಿತ ಸುಧಾಕರ್: ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ರಾಜ್ಯ ಸರ್ಕಾರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 

ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದ್ದಕ್ಕೆ ಪ್ರತಿಯಾಗಿ ಅಲ್ಲಿನ ವೈದ್ಯರು ₹6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ವಿಡಿಯೊವನ್ನು ಕಾಂಗ್ರೆಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 

‘40 ಪರ್ಸೆಂಟ್‌ ಕಮಿಷನ್’ ಸರ್ಕಾರ ಆಡಳಿತದಲ್ಲಿ ಸರ್ಕಾರಿ ಆಸ್ಪತ್ರೆಗಳು ಭ್ರಷ್ಟಾಚಾರದಿಂದ ಮೃತ್ಯುಕೂಪಗಳಾಗಿ ಬದಲಾಗಿವೆ. ಹಣವಿಲ್ಲದಿದ್ದರೆ ಜೀವವೇ ಇಲ್ಲ ಎಂಬಂತಹ ಪರಿಸ್ಥಿತಿ ಸರ್ಕಾರಿ ಅಸ್ಪತ್ರೆಗಳಲ್ಲಿದೆ. ತಮ್ಮ ಇಲಾಖೆಯನ್ನು ಗಮನಿಸದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಕಾಲಕಾಲಕ್ಕೆ ಕಮಿಷನ್ ತಲುಪಿದರೆ ಸಾಕು ಎಂದು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 

‘ಬಿಜೆಪಿ ಆಡಳಿತದಲ್ಲಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣಗಳ ವ್ಯವಸ್ಥೆ ಬುಡಮೇಲಾಗಿದೆ ಎಂದು ಅವರದ್ದೇ ಪಕ್ಷದ ನಾಯಕರು ಹೇಳುತ್ತಿದ್ದಾರೆ. ವೈಸ್ ಚಾನ್ಸಲರ್ ಹುದ್ದೆಗೆ  ₹5, 6 ಕೋಟಿ ಕೊಟ್ಟು ಬಂದಿದ್ದಾರೆ ಎನ್ನುವ ಮೂಲಕ ಅವರು ಸಚಿವ ಸಿ.ಎನ್‌.ಅಶ್ವತ್‌ನಾರಾಯಣ ಅವರ ಭ್ರಷ್ಟಾಚಾರವನ್ನು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಅವರು ಬಯಲು ಮಾಡಿದ್ದಾರೆ. ಬೊಮ್ಮಾಯಿ ಅವರೇ, ನಿಮ್ಮವರದ್ದೇ ಈ ಆರೋಪದ ಬಗ್ಗೆ ತನಿಖೆ ಯಾವಾಗ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

ಓದಿ... ಬಿಡದಿ | ಹೆರಿಗೆ ಮಾಡಿಸಿದ್ದಕ್ಕೆ ₹6 ಸಾವಿರ ಲಂಚ ಬೇಡಿಕೆ: ಇಬ್ಬರು ವೈದ್ಯರ ಅಮಾನತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು