ಭಾನುವಾರ, ಜೂನ್ 26, 2022
21 °C

ಡಿಕೆಶಿ ಮಾಡಿದ ಅಡುಗೆಯನ್ನು ಸಿದ್ದರಾಮಯ್ಯ ತಿಂದು ಮುಗಿಸುವುದು ಶತ ಸಿದ್ಧ: ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿ.ಕೆ.ಶಿವಕುಮಾರ್‌ ಅವರೇ, ನೀವು ಮಾಡಿದ ಅಡುಗೆಯನ್ನು ಸಿದ್ದರಾಮಯ್ಯ ಅವರು ತಿಂದು ಮುಗಿಸುವುದು ಶತಸಿದ್ಧ ಎಂದು ಬಿಜೆಪಿ ವ್ಯಂಗ್ಯವಾಡಿದೆ. 

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಬಣ ರಾಜಕೀಯ ಪ್ರಸ್ತಾಪಿಸಿ ಬಿಜೆಪಿ ಸರಣಿ  ಟ್ವೀಟ್ ಮಾಡಿದೆ. 

ಓದಿ... ಕೈತಪ್ಪಿದ ಟಿಕೆಟ್: ಸೌಜನ್ಯದಿಂದ ವರ್ತಿಸುವಂತೆ ಬೆಂಬಲಿಗರಿಗೆ ವಿಜಯೇಂದ್ರ ಮನವಿ

‘ಡಿಕೆಶಿ ಅವರೇ, ನೀವು ಬರೇ ಇಂತಹ ಮಾತಿನ ಬಾಣ ಎಸೆಯಬೇಕಷ್ಟೇ. ನೀವು ಶ್ರಮ ವಹಿಸಿ ಮಾಡಿದ ಅಡುಗೆಯನ್ನು ಸಿದ್ದರಾಮಯ್ಯ ತಿಂದು ಮುಗಿಸುವುದು ಶತಸಿದ್ಧ’ ಎಂದು ಬಿಜೆಪಿ ವ್ಯಂಗ್ಯವಾಡಿದೆ. 

‘ತಮ್ಮ ಪರಮಾಪ್ತ ಎಂ.ಬಿ. ಪಾಟೀಲ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ಸು ಕಂಡಿದ್ದಾರೆ. ಅದೇ ಎಂ.ಬಿ. ಪಾಟೀಲರು ಕೆಪಿಸಿಸಿ ಅಧ್ಯಕ್ಷರನ್ನೇ ಸಾರ್ವಜನಿಕ ವಲಯದಲ್ಲಿ, ಮಾಧ್ಯಮದವರ ಮುಂದೆ ಪ್ರಶ್ನಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇವಲ ಅಲಂಕಾರಿಕವೇ’ ಎಂದು ಬಿಜೆಪಿ ಪ್ರಶ್ನಿಸಿದೆ. 

ಓದಿ... ಪರಿಷತ್‌ ಚುನಾವಣೆ: ಟಿ.ಎ.ಶರವಣ ಜೆಡಿಎಸ್ ಅಭ್ಯರ್ಥಿ

‘ಒಂದು ವಾರದಲ್ಲಿ ಎರಡು ಬಾರಿ ದೆಹಲಿ ದಂಡಯಾತ್ರೆ, ಚಿಂತನ ಶಿಬಿರದಲ್ಲಿ ಒಗ್ಗಟ್ಟಿನ ಮಂತ್ರ ಜಪ. ಇಷ್ಟೆಲ್ಲಾ ಆದರೂ ಡಿ.ಕೆ.ಶಿವಕುಮಾರ್‌ ‌ಅವರಿಗೆ ಹಿರಿಯ ನಾಯಕ ಎಸ್‌.ಆರ್‌. ಪಾಟೀಲರಿಗೆ ಟಿಕೆಟ್‌ ಕೊಡಿಸಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರ ಹಠವೇ ಅಂತಿಮವಾಯಿತು. ಡಿಕೆಶಿ ಅವರೇ, ನೀವು ನಾಮಕಾವಸ್ಥೆ ಅಧ್ಯಕ್ಷರೇ’ ಎಂದು ಬಿಜೆಪಿ ಟೀಕಿಸಿದೆ. 

ಓದಿ... ಪರಿಷತ್‌ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ವಿಜಯೇಂದ್ರಗೆ ನಿರಾಸೆ

‘ತಿಹಾರ್ ಜೈಲಿನಿಂದ ದೊಡ್ಡ ಮೆರವಣಿಗೆ ಮಾಡಿಕೊಂಡು ಬಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದು ಎರಡು ವರ್ಷ ಕಳೆದರೂ ಪದಾಧಿಕಾರಿಗಳ ಪಟ್ಟಿಯನ್ನು ಭರ್ತಿ ಮಾಡಲು ಡಿಕೆಶಿ ಅವರಿಂದ ಸಾಧ್ಯವಾಗಿರಲಿಲ್ಲ. ಈಗ ಉಪಾಧ್ಯಕ್ಷರ ಸ್ಥಾನದ ಪಟ್ಟಿಯಲ್ಲಿ ಸಿದ್ದರಾಮಯ್ಯ ಸೂಚಿಸಿದ ಹೆಸರುಗಳಿವೆ. ಡಿಕೆಶಿ ಅಷ್ಟೊಂದು ಅಸಹಾಯಕ ಆಗಿದ್ದೇಕೆ. #ಅಸಹಾಯಕಡಿಕೆಶಿ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ಬಿಜೆಪಿ ಲೇವಡಿ ಮಾಡಿದೆ.

ಓದಿ...  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು