ಸೋಮವಾರ, ಅಕ್ಟೋಬರ್ 18, 2021
22 °C

‌ರಾಹುಲ್‌ ಗಾಂಧಿ ಒಮ್ಮೆ ಜನಿವಾರಧಾರಿ, ಮತ್ತೊಮ್ಮೆ ಕಾಶ್ಮೀರಿ ಪಂಡಿತ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಚುನಾವಣೆಯ ಸಂದರ್ಭದಲ್ಲಿ ನಾನಾ ವೇಷ ಧರಿಸುವ ಟ್ವಿಟರ್‌ ಟ್ರೋಲ್‌ ಖ್ಯಾತಿಯ ರಾಹುಲ್‌ ಗಾಂಧಿಯವರಿಗೆ ಈಗ ಧರ್ಮದ ನೆನಪಾಗಿದೆ’ ಎಂದು ಬಿಜೆಪಿ ಟೀಕಿಸಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಬಿಜೆಪಿ, ‘‌ರಾಹುಲ್‌ ಗಾಂಧಿ ಅವರು ಒಮ್ಮೆ ಜನಿವಾರಧಾರಿ ಎನ್ನುತ್ತಾರೆ. ಮತ್ತೊಮ್ಮೆ ಕಾಶ್ಮೀರಿ ಪಂಡಿತ ಎನ್ನುತ್ತಾರೆ. ಕುಟುಂಬದ ಮೂಲಕ್ಕೂ ರಾಹುಲ್‌ ಹೇಳಿಕೆಗೂ ಯಾವುದೇ ಸಾಮ್ಯತೆಯಿಲ್ಲ’ ಎಂದು ವ್ಯಂಗ್ಯವಾಡಿದೆ.

‘ದೇಶದ ಉದ್ಯಮ ರಂಗಕ್ಕೆ ಚೇತರಿಕೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಅನೇಕ ಉಪಕ್ರಮಗಳನ್ನು ಪ್ರಕಟಿಸಿದೆ. ಡ್ರೋನ್ ಉದ್ಯಮ, ವಾಹನ ಬಿಡಿಭಾಗ ಉದ್ಯಮಕ್ಕೆ ಪ್ರೋತ್ಸಾಹ, ಟೆಲಿಕಾಂ ರಂಗದಲ್ಲಿ ಶೇ. 100 ರಷ್ಟು ಎಫ್‌ಡಿಐ, ಆಟೋಮೊಬೈಲ್ ಕ್ಷೇತ್ರದಲ್ಲಿ 7.5 ಲಕ್ಷ ಉದ್ಯೋಗ ಸೃಷ್ಟಿಸಿದೆ’ ಎಂದು ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ... ಸುಧಾಕರ್‌ ಅವರೇ, ವೆಂಟಿಲೇಟರ್ ಕೊರತೆ ನೀಗಿಸಲು ಇನ್ನೆಷ್ಟು ದಿನ ಬೇಕು?: ಕಾಂಗ್ರೆಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು