ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಚಂದ್ರ, ಗೀತಾಗೆ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ 2022–23ನೇ ಸಾಲಿನ ವಾರ್ಷಿಕ ಪ‍್ರಶಸ್ತಿಗಳು ಪ್ರಕಟ
Last Updated 25 ಆಗಸ್ಟ್ 2022, 15:33 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2022–23ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಗೌರವ ಪ್ರಶಸ್ತಿ’ಗೆಚನ್ನರಾಯಪಟ್ಟಣದ ಗಾಯಕಸಿ.ಆರ್. ರಾಮಚಂದ್ರ ಹಾಗೂಮಂಗಳೂರಿನ ನೃತ್ಯ ಗುರುಗೀತಾ ಸರಳಾಯ ಆಯ್ಕೆಯಾಗಿದ್ದಾರೆ.

ಇಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಅವರು ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದರು.ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ ಸೇರಿದಂತೆ ಏಳು ವಿಭಾಗಗಳಿಂದ 16 ಕಲಾವಿದರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿಯು ತಲಾ ₹ 50 ಸಾವಿರ ಹಾಗೂ ವಾರ್ಷಿಕ ಪ್ರಶಸ್ತಿ ತಲಾ ₹ 25 ಸಾವಿರ ನಗದು ಬಹುಮಾನ ಹೊಂದಿದೆ.

‘ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿಸೆಪ್ಟೆಂಬರ್ ತಿಂಗಳ ಕೊನೆಯ ವಾರ ಹಮ್ಮಿಕೊಳ್ಳಲಾಗುವುದು’ ಎಂದು ಆನೂರು ಅನಂತಕೃಷ್ಣ ಶರ್ಮ ತಿಳಿಸಿದರು.

‘ಕರ್ನಾಟಕ ಕಲಾಶ್ರೀ’ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರು

ಕರ್ನಾಟಕ ಸಂಗೀತ

1. ಸಿ.ಎ. ನಾಗರಾಜ, ಮೈಸೂರು (ಹಾಡುಗಾರಿಕೆ)
2. ಎಂ. ನಾರಾಯಣ, ಮಂಗಳೂರು (ಹಾಡುಗಾರಿಕೆ)
3. ಪಿ.ಕೆ. ದಾಮೋದರಂ, ಪುತ್ತೂರು (ಸ್ಯಾಕ್ಸೋಫೋನ್)

ಹಿಂದೂಸ್ತಾನಿ ಸಂಗೀತ

1. ಎಂ.ಪಿ. ಹೆಗಡೆ ಪಡಿಗೆರೆ, ಶಿರಸಿ (ಗಾಯನ)
2. ಮಹಾದೇವಪ್ಪ ನಿಂಗಪ್ಪ ಹಳ್ಳಿ, ಗದಗ (ಗಾಯನ)
3. ಹನುಮಂತಪ್ಪ ಬ. ತಿಮ್ಮಾಪೂರ, ಹಾವೇರಿ (ವಯಲಿನ್)
4. ಫಯಾಜ್ ಖಾನ್, ಬೆಂಗಳೂರು (ಸಾರಂಗಿ/ಗಾಯನ)

ನೃತ್ಯ

1. ರೋಹಿಣಿ ಇಮಾರತಿ, ಧಾರವಾಡ
2. ಪುಷ್ಪ ಕೃಷ್ಣಮೂರ್ತಿ, ಶಿವಮೊಗ್ಗ
3. ಪುರುಷೋತ್ತಮ, ಬೆಂಗಳೂರು

ಸುಗಮ ಸಂಗೀತ

1. ಸಿದ್ರಾಮಪ್ಪ ಪೊಲೀಸ್ ಪಾಟೀಲ್, ಕಲಬುರ್ಗಿ
2. ಮಧರಾ ರವಿಕುಮಾರ್, ಬೆಂಗಳೂರು

ಕಥಾಕೀರ್ತನ ‌

1. ಶೀಲಾ ನಾಯ್ಡು, ಬೆಂಗಳೂರು

ಗಮಕ

1. ಅನಂತ ನಾರಾಯಣ, ಹೊಸಹಳ್ಳಿ
2. ಚಂದ್ರಶೇಖರ ಕೇದಿಲಾಯ, ಉಡುಪಿ

ವಿಶೇಷ ಪ್ರಶಸ್ತಿ

1.ಪ್ರವೀಣ್ ಡಿ. ರಾವ್, ಬೆಂಗಳೂರು (ವಾದಕರು, ಸಂಯೋಜಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT