ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಸಕ್ರಿಯ ಪ್ರಕರಣಗಳು 87 ಸಾವಿರಕ್ಕೆ ಇಳಿಕೆ

Last Updated 7 ಫೆಬ್ರುವರಿ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳು ಗಣನೀಯ ಇಳಿಕೆಯಾಗಿವೆ. ಸದ್ಯ87,080 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿತರ ಹೊಸ ಪ್ರಕರಣಗಳೂ ತಗ್ಗಿವೆ. ಒಂದು ದಿನದಲ್ಲಿ6,151 ಜನರು ಸೋಂಕಿಗೊಳಪಟ್ಟಿದ್ದಾರೆ. ಈವರೆಗೆ ಸೋಂಕಿತರಾದವರ ಸಂಖ್ಯೆಯು 39.02 ಲಕ್ಷ ದಾಟಿದೆ. ಸೋಂಕು ದೃಢ ಪ್ರಮಾಣವು ಶೇ 6.19ರಷ್ಟು ವರದಿಯಾಗಿದೆ. ಹಿಂದಿನ 24 ಗಂಟೆಗಳಲ್ಲಿ16,802 ಮಂದಿ ಚೇತರಿಸಿಕೊಂಡಿದ್ದಾರೆ. ಗುಣಮುಖರ ಒಟ್ಟು ಸಂಖ್ಯೆ 37.75 ಲಕ್ಷದಷ್ಟಿದೆ.

ಕೋವಿಡ್‌ ಪೀಡಿತರ ಪೈಕಿ ಸೋಮವಾರ 49 ಜನ ಅಸುನೀಗಿದ್ದಾರೆ. ಈವರೆಗೆ39,396 ಮಂದಿ ಸಾವಿಗೀಡಾಗಿದ್ದು, ಮರಣ ಪ್ರಮಾಣ ದರವು ಶೇ 0.79ರಷ್ಟು ದಾಖಲಾಗಿದೆ. ಕೋವಿಡ್‌ ಪರೀಕ್ಷೆಗಳ ಸಂಖ್ಯೆ ಇಳಿಕೆಯಾಗಿದೆ. 24 ಗಂಟೆಗಳಲ್ಲಿ 99,254 ಮಾದರಿಗಳನ್ನಷ್ಟೇ ಪರೀಕ್ಷಿಸಲಾಗಿದೆ.

ಜಿಲ್ಲೆಗಳಲ್ಲೂ ಸೋಂಕಿತರ ಪ್ರಕರಣಗಳು ತಗ್ಗಿವೆ. ಬೆಂಗಳೂರಿನಲ್ಲಿ2,718 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. 16 ಜಿಲ್ಲೆಗಳಲ್ಲಿ ಇದು ಮೂರಂಕಿಗೆ ಇಳಿದಿದ್ದು, 13 ಜಿಲ್ಲೆಗಳಲ್ಲಿ ಎರಡಂಕಿಯಷ್ಟು ವರದಿಯಾಗಿದೆ.

ಕೋವಿಡ್‌ ಪೀಡಿತರ ಪೈಕಿ ಬೆಂಗಳೂರಿನಲ್ಲಿ 15 ಮಂದಿ ಮೃತರಾಗಿದ್ದಾರೆ. ಮೈಸೂರಿನಲ್ಲಿ 6, ತುಮಕೂರು ಹಾಗೂ ಉಡುಪಿಯಲ್ಲಿ ತಲಾ 4, ದಕ್ಷಿಣ ಕನ್ನಡದಲ್ಲಿ 3, ಬೆಳಗಾವಿ, ಧಾರವಾಡ, ಹಾಸನ ಹಾಗೂ ಉತ್ತರ ಕನ್ನಡದಲ್ಲಿ ತಲಾ 2, ಬಾಗಲಕೋಟೆ, ಬಳ್ಳಾರಿ, ಬೀದರ್‌, ಚಾಮರಾಜನಗರ, ಚಿತ್ರದುರ್ಗ, ಹಾವೇರಿ, ಮಂಡ್ಯ, ರಾಯಚೂರು, ರಾಮನಗರ ಜಿಲ್ಲೆಗಳಲ್ಲಿ ತಲಾ ಒಬ್ಬರು ಅಸುನೀಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT