ಶುಕ್ರವಾರ, ಮೇ 20, 2022
21 °C

ನಾಟಕ, ನೃತ್ಯ ಶಿಕ್ಷಕರ ಸಂಘ ಅಸ್ತಿತ್ವಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲಾ ನಾಟಕ ಮತ್ತು ನೃತ್ಯ ಶಿಕ್ಷಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಎಂ.ಮಲ್ಲೇಶ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

‘ನಾಟಕ ಮತ್ತು ನೃತ್ಯದ ಮೂಲಕ ಶಿಕ್ಷಣದ ಗುಣಮಟ್ಟ ಸುಧಾರಿಸುವ, ಧಾರ್ಮಿಕ ಕಟ್ಟುಪಾಡು
ಗಳು, ಮೂಢನಂಬಿಕೆ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜ ಸುಧಾರಕರ ಬಗ್ಗೆ ನಾಟಕ ಮತ್ತು ನೃತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ, ಇಲಾಖೆಯಲ್ಲಿ ಅಲ್ಪ ಸಂಖ್ಯಾತರಾಗಿರುವ ನಾಟಕ ಮತ್ತು ನೃತ್ಯ ಶಿಕ್ಷಣ ಶಿಕ್ಷಕರ ವೇತನ ತಾರತಮ್ಯ, ವರ್ಗಾವಣೆ, ಬಡ್ತಿ, ಕಲಿಕಾ ಸಾಮಗ್ರಿಗಳಿಗೆ ಅನುದಾನದ ಕೊರತೆ, ಹೊಸ ನೇಮಕಾತಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದು ಸಂಘದ ಉದ್ದೇಶ’ ಎಂದು ಪ್ರಕಟಣೆ ತಿಳಿಸಿದೆ. 

ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು: ಎಂ.ಮಲ್ಲೇಶ್‌ (ರಾಜ್ಯ ಘಟಕದ ಅಧ್ಯಕ್ಷ), ಶ್ರೀಕಾಂತ್ ಕುಮಟಾ (ಪ್ರಧಾನ ಕಾರ್ಯದರ್ಶಿ), ಕೆ.ವೆಂಕಟೇಶ್ವರ (ಸಂಘಟನಾ ಕಾರ್ಯದರ್ಶಿ), ಎಲ್‌.ಗುರುರಾಜ್‌ (ಖಜಾಂಚಿ), ಬಿ.ಎಸ್‌.ಇಂದು (ಉಪಾಧ್ಯಕ್ಷೆ), ಡಿ.ನಾಗೇಶ ನಾಯ್ಕ (ಸಹ ಕಾರ್ಯದರ್ಶಿ), ಪ್ರಜ್ಞಾ ಹೆಗಡೆ (ಸಹ ಸಂಘಟನಾ ಕಾರ್ಯದರ್ಶಿ).

ನಿರ್ದೇಶಕರು: ಎಸ್‌.ವಿ.ಭಾನುಪ್ರಕಾಶ್‌, ಎನ್‌.ಗೋಪಾಲಕೃಷ್ಣಪ್ಪ, ಕೆ.ಪಿ.ಲೋಕೇಶ್‌, ಬಿ.ಪ್ರವೀಣಕುಮಾರ, ಈಡಿಗರ ವೆಂಕಟೇಶ್‌, ಎನ್‌. ಶೇಖರಪ್ಪ, ಶಿವನಾಯ್ಕ, ರಾಮಣ್ಣ ಮಡಿವಾಳರ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.