ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ: ಯೂಸುಫ್ ಷರೀಫ್ ₹1,743 ಕೋಟಿ ಮೌಲ್ಯದ ಸ್ಥಿರಾಸ್ತಿ ಒಡೆಯ

Last Updated 23 ನವೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ, ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಉದ್ಯಮಿ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಅತ್ಯಂತ ಶ್ರೀಮಂತ ವ್ಯಕ್ತಿ!

ಯೂಸುಫ್ ಷರೀಫ್ ಅವರು 5ನೇ ತರಗತಿವರೆಗೆ ಓದಿದ್ದು, ಅವರಿಗೆ ಇಬ್ಬರು ಪತ್ನಿಯರು, ಐವರು ಮಕ್ಕಳಿದ್ದಾರೆ.

ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅವರು ತಮ್ಮ ಬಳಿ ₹ 97.98 ಕೋಟಿ ಮೌಲ್ಯದ ಚರಾಸ್ತಿ, ₹ 1,643.59 ಕೋಟಿ ಮೌಲ್ಯದ ಸ್ಥಿರಾಸ್ತಿ, ಇಬ್ಬರ ಪತ್ನಿಯರ ಪೈಕಿ, ಮೊದಲ ಪತ್ನಿಯ ಬಳಿ ₹ 98.96 ಲಕ್ಷ ಮೌಲ್ಯದ ಚರಾಸ್ತಿ, ₹ 1.07 ಕೋಟಿ ಮೌಲ್ಯದ ಸ್ಥಿರಾಸ್ತಿ, ಎರಡನೇ ಪತ್ನಿಯ ಬಳಿ ₹ 32.22 ಲಕ್ಷ ಮೌಲ್ಯದ ಚರಾಸ್ತಿ ಇದೆ. ತಮಗೆ ₹64.24 ಕೋಟಿ ಸಾಲವಿದೆ ಎಂದು ಘೋಷಿಸಿ
ಕೊಂಡಿದ್ದಾರೆ.

ಒಟ್ಟು ಸ್ಥಿರಾಸ್ತಿಯ ಪೈಕಿ, ಕೈಯಲ್ಲಿ ₹ 19.53 ಲಕ್ಷ, ಬ್ಯಾಂಕ್‌ ಖಾತೆಯಲ್ಲಿ ₹ 16.87 ಲಕ್ಷವಿದೆ. ₹ 58.10 ಕೋಟಿ ಇತರರಿಗೆ ವೈಯಕ್ತಿಕ ಸಾಲ ನೀಡಿದ್ದು, ₹ 2.99 ಕೋಟಿ ಮೌಲ್ಯದ ವಿವಿಧ ವಾಹನಗಳಿವೆ. ಅಲ್ಲದೆ, ₹ 2.19 ಕೋಟಿ ಮೌಲ್ಯದ ಚಿನ್ನಾಭರಣವಿದೆ ಎಂದೂ ಪ್ರಮಾಣ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ತಮ್ಮ ಮೊದಲ ಪತ್ನಿಯ ಬ್ಯಾಂಕ್‌ ಖಾತೆಯಲ್ಲಿ ₹ 16.99 ಲಕ್ಷ ಹಣವಿದೆ. ಅಲ್ಲದೆ, ₹ 1.65 ಲಕ್ಷ ಮೌಲ್ಯದ ವಾಹನ, ₹ 77.15 ಲಕ್ಷ ಮೌಲ್ಯದ ಚಿನ್ನಾಭರಣವಿದೆ. ಎರಡನೇ ಪತ್ನಿಯ ಹೆಸರಿನಲ್ಲಿ ₹ 30.37 ಲಕ್ಷ ಹಾಗೂ ಒಟ್ಟು ಐವರು ಮಕ್ಕಳ ಪೈಕಿ ಮೊದಲ ಮಗಳ ಹೆಸರಿನಲ್ಲಿ ₹ 58.73 ಲಕ್ಷ ಮೌಲ್ಯದ ಚಿನ್ನಾಭರಣವಿದೆ ಎಂದೂ ಅವರು ಘೋಷಿಸಿಕೊಂಡಿದ್ದಾರೆ. ನಗರದ ಯಲಹಂಕ ನ್ಯೂಟೌನ್‌, ಜಯನಗರ, ಹಲಸೂರು ಮತ್ತು ಕಾಟನ್‌ಪೇಟೆ ಪೊಲೀಸ್‌ ಠಾಣೆಗಳಲ್ಲಿ ತಲಾ ಒಂದೊಂದು ಅಪರಾಧ ಪ್ರಕರಣ ಇವರ ವಿರುದ್ಧ ದಾಖಲಾಗಿದೆ. ಆದಾಯ ತೆರಿಗೆ ₹ 13.43 ಕೋಟಿ ಪಾವತಿ ಬಾಕಿ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ಇನ್ನೂ ಆರಂಭ ಆಗಿಲ್ಲ ಎಂದೂ ಅವರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಎಚ್‌.ಎಸ್‌. ಗೋಪಿನಾಥ್‌ ಬಳಿ ₹ 47.84 ಕೋಟಿ ಆಸ್ತಿ

ಬೆಂಗಳೂರು: ವಿಧಾನ ಪರಿಷತ್‌ನ ಬೆಂಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಚ್‌.ಎಸ್‌. ಗೋಪಿನಾಥ್‌ ₹ 47.84 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಗೆ ಮಂಗಳವಾರ ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅವರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದು, ₹ 42.40 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ₹ 5.44 ಕೋಟಿ ಮೌಲ್ಯದ ಚರಾಸ್ತಿಗಳನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ.

ಈ ಪೈಕಿ ಪೂರ್ಣ ಪ್ರಮಾಣದ ಸ್ಥಿರಾಸ್ತಿ ಗೋಪಿನಾಥ್‌ ಅವರ ಹೆಸರಿನಲ್ಲೇ ಇದೆ. ಅವರ ಪತ್ನಿ ₹ 2.11 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದರೆ, ₹ 1.38 ಕೋಟಿ ಮೌಲ್ಯದ ಚರಾಸ್ತಿ ಒಟ್ಟು ಕುಟುಂಬದ ಹೆಸರಿನಲ್ಲಿದೆ.

ಸಿವಿಲ್‌ ಎಂಜಿನಿಯರಿಂಗ್‌ ಪದವೀಧರರಾಗಿರುವ ಗೋಪಿನಾಥ್‌, ₹ 3.75 ಕೋಟಿ ಸಾಲ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT