ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಿತಿ ವಿಸರ್ಜನೆಯಾದರೂ ಅಧ್ವಾನ ಉಳಿದಿವೆ: ಕಿಮ್ಮನೆ ರತ್ನಾಕರ

Last Updated 11 ಜೂನ್ 2022, 19:31 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರೋಹಿತ್‌ ಚಕ್ರತೀರ್ಥ ಸಮಿತಿ ವಿಸರ್ಜನೆಯಾಗಿದ್ದರೂ ಪಠ್ಯದಲ್ಲಿನ ಅಧ್ವಾನಗಳು ಹಾಗೆಯೇ ಉಳಿದಿವೆ. ಪರಿಷ್ಕರಣೆಗೊಂಡ ಪಠ್ಯದ ಸಂಪೂರ್ಣ ಪಿಡಿಎಫ್ ಇನ್ನೂ ಬಿಡುಗಡೆ ಮಾಡಿಲ್ಲ. ಇದು ಒಂದು ಕೋಟಿ ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ’ ಎಂದುಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅಸಮಾಧಾನ ವ್ಯಕ್ತಪಡಿಸಿದರು.

‘ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ರಚಿಸಿದ್ದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಎರಡೂವರೆ ವರ್ಷ ಕಾಲ ಸುದೀರ್ಘ ಅಧ್ಯಯನ ನಡೆಸಿ ಪಠ್ಯ ಪರಿಷ್ಕರಣೆ ಮಾಡಿತ್ತು. ಆದರೆ, ರೋಹಿತ್ ಚಕ್ರತೀರ್ಥ ಸಮಿತಿ ದಿಢೀರ್ ಹುಟ್ಟಿಕೊಂಡು ಅಷ್ಟೇ ವೇಗದಲ್ಲಿ ಪರಿಷ್ಕರಣೆ ಮಾಡಿ, ವಿಸರ್ಜನೆಯೂ ಆಗಿದೆ. ಈ ವಿಚಾರದಲ್ಲಿ ಚಕ್ರತೀರ್ಥ ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಕ್ರೌರ್ಯದ ಪರಮಾವಧಿ. ಯಾವುದೇ ಆಕ್ಷೇಪಾರ್ಹ ಪರಿಷ್ಕರಣೆ ಇಲ್ಲದಿದ್ದರೆ ಪಠ್ಯ ಬಹಿರಂಗಪಡಿಸಲು ಸಮಸ್ಯೆ ಏನು? ರೋಹಿತ್ ಚಕ್ರತೀರ್ಥ ಅವರ ವಿದ್ಯಾರ್ಹತೆ ಏನು? ಬೋಧನಾ ಅನುಭವ ಏನು’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಪಠ್ಯ ಪರಿಷ್ಕರಣೆ ವಿಚಾರ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆಯಾಗಬೇಕಿತ್ತು. ಇದು ಆಗದಿದ್ದರೆ ವಿಷಯ ತಜ್ಞರ ಜೊತೆಗಾದರೂ ಚರ್ಚಿಸಬೇಕಿತ್ತು. ಅದನ್ನೂ ಮಾಡಿಲ್ಲ. ಬರಗೂರು ರಾಮಚಂದ್ರಪ್ಪ ಪರಿಷ್ಕರಣೆ ಮಾಡಿದಾಗ ಜಗದೀಶ್ ಶೆಟ್ಟರ್,ಕೆ.ಎಸ್. ಈಶ್ವರಪ್ಪ ವಿರೋಧ ಪಕ್ಷದ ನಾಯಕರ ಸ್ಥಾನದಲ್ಲಿದ್ದರು. ಆಗ ಅವರು ಏನನ್ನೂ ಮಾತನಾಡಲಿಲ್ಲ. ಆದರೆ, ಈಗ ಅಂದಿನ ಪರಿಷ್ಕರಣೆ ತಪ್ಪಾಗಿದೆ ಎಂದು ಹೇಳುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT