ಮಂಗಳವಾರ, ಸೆಪ್ಟೆಂಬರ್ 21, 2021
27 °C
‘ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯಾಗ್ಬೇಕಾ...?’

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‘ಅಡುಗೆ ಮನೆ’ಯಿಂದ ಒಂದು ಪ್ರಶ್ನೆ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಅಡುಗೆ ಮನೆಯಲ್ಲಿ ಚಾ ಹೀರುತ್ತಾ, ‘ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯಾಗ್ಬೇಕಾ...?’ ಎಂಬ ಪ್ರಶ್ನೆ ಕೇಳಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ಮನೆಯ ಅಡುಗೆ ಮನೆಯಲ್ಲಿ ಈ ವಿಡಿಯೊ ಮಾಡಿರುವ ಅವರು ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ, ಅಡುಗೆ ಅನಿಲ ಬೆಲೆ ಹೆಚ್ಚಳದ ವಿರುದ್ಧ ಜನಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

‘ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆಯಾಗ್ಬೇಕಾ...?’ ಎಂಬ ಪ್ರಶ್ನೆ ಮುಂದಿಟ್ಟು ವಿಡಿಯೊ ಬಿಡುಗಡೆ ಮಾಡಿದ್ದಾರೆ.

ಆ ವಿಡಿಯೋದಲ್ಲಿ ಏನಿದೆ?
ಡಿ.ಕೆ. ಶಿವಕುಮಾರ್‌ ವಿಡಿಯೊದಲ್ಲಿ ಹೀಗೆ ಮಾತನಾಡಿದ್ದಾರೆ....

‘ನಮಸ್ಕಾರ ಸ್ನೇಹಿತರೇ... ನಾನು ಯಾಕೆ ಅಡುಗೆ ಮನೆಯಲ್ಲಿದ್ದೀನಿ’ ಅಂತ ನಿಮಗೆ ಆಶ್ಚರ್ಯವಾಗಬಹುದು. ನಾನು ಮಾತನಾಡುತ್ತಿರುವ ವಿಷಯ ಅಡುಗೆ ಮನೆಗೆ ಸಂಬಂಧಿಸಿದ್ದು. ಈ ವಾರ ನಾನು ಕೇಳುವ ಪ್ರಶ್ನೆ, ಎಲ್‌ಪಿಜಿ ಗ್ಯಾಸ್‌ ಬೆಲೆ ಏರಿಕೆ ಆಗಿರುವುದು ಇಳಿಸಬೇಕಾ? ಬೇಡವಾ? ಎಂದು...

‘ಎಲ್‌ಪಿಜಿ ಸಿಲಿಂಡರ್ ಬೆಲೆ 888 ರೂಪಾಯಿಯಿಂದ ಸದ್ಯದಲ್ಲೇ 900ರಿಂದ 1000 ರೂಪಾಯಿವರೆಗೆ ಕೂಡಾ ತಲುಪಬಹುದು. ರಾಜ್ಯದ ಜನತೆಗೆ ಎಂಥ ಸಂಕಷ್ಟ ನೋಡಿ... ಕೋವಿಡ್‌ನಿಂದಾಗಿ ಜನ ಸಾಯುತ್ತಿದ್ದಾರೆ. ಕೆಲಸ ಕಳ್ಕೊಳ್ಳುತ್ತಿದ್ದಾರೆ. ಆದರೆ, ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ.

‘ರಾಜ್ಯದ ನಾನಾ ಭಾಗಗಳಲ್ಲಿ ನಾನು ತಿರುಗಾಡಿ ಬಂದಿದ್ದೇನೆ. ಬಡವರು, ಮಧ್ಯಮ ವರ್ಗದವರು, ಶ್ರೀಮಂತರನ್ನು ಎಲ್ಲರನ್ನೂ ನಾನು ಭೇಟಿಯಾಗಿ ಬಂದಿದ್ದೇನೆ. ಎಲ್ಲರೂ ಬೆಲೆ ಏರಿಕೆಯಿಂದ ಬೆಂದು ಹೋಗಿದ್ದಾರೆ’

‘ಬಡ ಕುಟುಂಬದವರ ಮುಂದೆ ಸದ್ಯಕ್ಕೆ ಇರುವ ಆಯ್ಕೆ ಎರಡೇ. ಒಂದೋ ಮಕ್ಕಳ ಶಾಲೆಯಫೀಸ್ ಕಟ್ಟಬೇಕಾ ಅಥವಾ ಗ್ಯಾಸ್ ಸಿಲಿಂಡರ್ ಖರೀದಿಸಬೇಕಾ... ಪೋಷಕರು ಉದ್ಯೋಗ ಕಳೆದುಕೊಂಡ ಹಿನ್ನೆಲೆ ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತಿದ್ದಾರೆ. ನಿರುದ್ಯೋಗದಿಂದ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂಥ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡುವುದು ನ್ಯಾಯನಾ ಇಲ್ಲವಾ ಅನ್ನೋದನ್ನು ತಾವೇ ತೀರ್ಮಾನ ಮಾಡಬೇಕು...

‘ಗ್ಯಾಸ್ ಸಿಲಿಂಡರ್‌ಗೆ ಹಣ ಇಲ್ಲದೆ ಎಷ್ಟೋ ಕುಟುಂಬಗಳು ಸೌದೆ ಒಲೆ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ನನ್ನ ಬೇಡಿಕೆ ಒಂದೇ ಒಂದು... ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ಕನಿಷ್ಠ 150 ರೂಪಾಯಿಯಾದರು ಕೂಡಾ ಇಳಿಕೆ ಆಗಬೇಕಲ್ಲವೇ. ನಿಮ್ಮ ಅಭಿಪ್ರಾಯವನ್ನು ಫೇಸ್‌ಬುಕ್‌, ಟ್ವಿಟರ್‌, ಇನ್ಟಾಗ್ರಾಂ ಮೂಲಕ ಮೂಲಕ ತಿಳಿಸಿ. ನಾನು ನಿಮ್ಮ ಉತ್ತರವನ್ನು ನಿರೀಕ್ಷೆ ಮಾಡುತ್ತೇನೆ’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು