ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ ಯೋಜನೆಯಲ್ಲಿನ ಭ್ರಷ್ಟಾಚಾರದ ತನಿಖೆಗೆ ಡಿಕೆಶಿ ಆಗ್ರಹ

ಅಕ್ಷರ ಗಾತ್ರ

ಬೆಂಗಳೂರು: ಬೆಳೆ ವಿಮೆ ಯೋಜನೆಯ ಭ್ರಷ್ಟಾಚಾರಗಳ ಕುರಿತು ತನಿಖೆ ನಡೆಸಬೇಕು. ಇದು ಕಾಂಗ್ರೆಸ್‌ ಪಕ್ಷದ ಆಗ್ರಹ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಭಾನುವಾರ ಹೇಳಿದ್ದಾರೆ.

ಮಧ್ಯವರ್ತಿಗಳು ಬೆಳೆ ವಿಮೆ ಪರಿಹಾರಕ್ಕೆ ಕನ್ನ ಹಾಕುತ್ತಿರುವ ಬಗ್ಗೆ ‘ಪ್ರಜಾವಾಣಿ’ಯು ಭಾನುವಾರದ ಸಂಚಿಕೆಯ ‘ಒಳನೋಟ’ದಲ್ಲಿ ‘ಬೆಳೆ ವಿಮೆಗೆ ಮಧ್ಯವರ್ತಿಗಳ ಕನ್ನ’ ಎಂಬ ಶೀರ್ಷಿಕೆಯ ಅಡಿ ವಿಸ್ತೃತ ವರದಿ ಪ್ರಕಟಿಸಿತ್ತು.

ಮುಖಪಟದ ಅಗ್ರ ವರದಿಯನ್ನು ಡಿ.ಕೆ ಶಿವಕುಮಾರ್‌ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನಿಮ್ಮ ಸಂತೋಷವನ್ನೂ ವಿಮೆಗೆ ಒಳಪಡಿಸಲಾಗಿದೆ' ಇದು ಕೇಂದ್ರ ಸರ್ಕಾರದ ಪ್ರತಿಷ್ಠಿತ ಬೆಳೆ ವಿಮೆ ಯೋಜನೆಯ ಘೋಷ ವಾಕ್ಯ. ವಾಸ್ತವದಲ್ಲಿ ಇದು ಅನ್ನದಾತರ ಸಂತೋಷವನ್ನೇ ಕಸಿದುಕೊಂಡಿದೆ. ಕಳ್ಳರ ಸಂತೆಯಲ್ಲಿ ಎಲ್ಲರೂ ಪಿಕ್‌ಪಾಕೆಟ್‌ ಮಾಡುವವರೇ. ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬೆಳೆ ವಿಮೆ ಯೋಜನೆಯು ಸಾಕ್ಷಿ ಹೇಳುತ್ತಿದೆ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ರೈತರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಬೇಕಾದ ಯೋಜನೆಯಲ್ಲಿ ಮಧ್ಯವರ್ತಿಗಳ ಉಪಟಳವೇ ಹೆಚ್ಚಾಗಿದೆ. ಮೂಗಿನ ಕೆಳಗೇ ಭ್ರಷ್ಟಾಚಾರ ನಡೆಯುತ್ತಿದ್ದರೂ ಸರ್ಕಾರ ಮೌನವಾಗಿರುವುದೇಕೆ? ಈ ಕೂಡಲೇ ಬೆಳೆ ವಿಮೆ ಯೋಜನೆಯ ಭ್ರಷ್ಟಾಚಾರಗಳ ಕುರಿತು ತನಿಖೆ ನಡೆಸಬೇಕು. ಇದು ಕಾಂಗ್ರೆಸ್‌ ಪಕ್ಷದ ಆಗ್ರಹ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT