ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲು, ಕೇಸ್‌ಗೆ ಹೆದರಲ್ಲ, ಜನರ ಹಿತಕ್ಕಾಗಿ ಪಾದಯಾತ್ರೆ ಸ್ಥಗಿತ:‌ ಡಿಕೆ‌ಶಿ

Last Updated 13 ಜನವರಿ 2022, 8:36 IST
ಅಕ್ಷರ ಗಾತ್ರ

ರಾಮನಗರ:‌ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ,ಕಾಂಗ್ರೆಸ್‌ ನಡೆಸುತ್ತಿದ್ದ ಮೇಕೆದಾಟು ಪಾದಯಾತ್ರೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸಾಂಕ್ರಾಮಿಕವು ನಿಯಂತ್ರಣಕ್ಕೆ ಬಂದ ನಂತರ ಹೋರಾಟ ಮುಂದುವರಿಸಲು ಪಕ್ಷ ನಿರ್ಧರಿಸಿದೆ.

ನಗರದಲ್ಲಿರುವಪಕ್ಷದ ಜಿಲ್ಲಾ ಕಚೇರಿಯಲ್ಲಿಮುಖಂಡರೊಂದಿಗೆ ನಡೆಸಿದಸಭೆಯ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ‌ ನಿರ್ಧಾರ ಪ್ರಕಟಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ನಾನು ಮೂರು ದಿನ ಮೌನವಾಗಿರುವುದಾಗಿ ಹೇಳಿದ್ದೆ. ಈಗ ಮುರಿಯಲೇಬೇಕಾಗಿ ಬಂದಿದೆ. ನಿನ್ನೆ ರಾತ್ರಿ ಮಲಗಿದ್ದಾಗ, ಒಬ್ಬರುಅಧಿಕಾರಿ ಬಂದಿದ್ದರು.ಅಸಿಸ್ಟೆಂಟ್ ಕಮಿಷನರ್ ಅಂತ ಹೇಳಿದರು. ನೋಟೀಸ್‌ನಲ್ಲಿ ಜಿಲ್ಲಾಧಿಕಾರಿ ಸಹಿ ಇತ್ತು. ಅವರಿಗೆ (ಜಿಲ್ಲಾಧಿಕಾರಿಗೆ) ಕೋವಿಡ್ ಇದೆ. ಸಹಿ ಹಾಕಿದ್ದರಿಂದ ವಾಪಸ್ ಕಳಿಸಿದೆ. ಆದರೆ, ಗೋಡೆಯ ಮೇಲೆ ಅಂಟಿಸಿ ಹೋದರುಎಂದು ತಿಳಿಸಿದರು.

ಮುಂದುವರಿದು,ನ್ಯಾಯಾಲಯದ ಭಾವನೆಗೂ ಅತೀ ಗೌರವ ಕೊಡುತ್ತಿದ್ದೇವೆ. ಜನರ ಆರೋಗ್ಯದ ಹಿತದೃಷ್ಟಿಯಿಂದ, ಈ ನಿರ್ಧಾರ ಕೈಗೊಂಡಿದ್ದೇವೆ.ಪಾದಯಾತ್ರೆ ಆರಂಭವಾದ ದಿನಕೋವಿಡ್‌ನಿಂದ ಒಬ್ಬರೂ ಐಸಿಯುನಲ್ಲಿ ಇರಲಿಲ್ಲ, ಒಬ್ಬರೂ ಸತ್ತಿರಲಿಲ್ಲ. ಈಗ ಟೆಸ್ಟ್ ಮಾಡಿ, ಕೋವಿಡ್ ಸಂಖ್ಯೆ ಉಲ್ಬಣವಾಗಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಾನು ಈಗ ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.

ಇಬ್ಬರೇ (ಸಿದ್ದರಾಮಯ್ಯ ಮತ್ತು ನಾನು)ಪಾದಯಾತ್ರೆ ಮುಂದುವರಿಸಲು ನಿರ್ಧರಿಸಿದ್ದೆವು. ಆದರೆ, ಜನರು ಜಾಸ್ತಿ ಸೇರುತ್ತಾರೆ ಎಂದು, ಜನರ ಹಿತದೃಷ್ಟಿಯಿಂದ ಈ (ಪಾದಯಾತ್ರೆ ಸ್ಥಗಿತ) ನಿರ್ಧಾರ ಮಾಡಿದ್ದೇವೆ.ಈ ಜೈಲು, ಈ ಬೇಲು, ಕೇಸು- ಇವುಗಳಿಗೆ ಯಾವುದಕ್ಕೂ ಹೆದರುವುದಿಲ್ಲ ಎಂದು ಶಿವಕುಮಾರ್‌ ಗುಡುಗಿದರು.

ಬಸವನಗುಡಿಕಾರ್ಯಕ್ರಮಕ್ಕೆಕಾರ್ಪೊರೇಶನ್ (ಬಿಬಿಎಂಪಿ) ಅನುಮತಿ ಹಿಂತೆಗೆದುಕೊಂಡಿದೆ. ಯಾತ್ರೆ ಆರಂಭವಾಗುವಾಗಲೇ ಅದನ್ನು ಹೇಳಬೇಕಿತ್ತಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ,ನಾವು ಪಾದಯಾತ್ರೆ ನಿಲ್ಲಿಸುತ್ತಿಲ್ಲ.ತಾತ್ಕಾಲಿಕ ಸ್ಥಗಿತ ಅಷ್ಟೇ. ಯಾತ್ರೆಇಲ್ಲಿಂದಲೇ ಮತ್ತೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT