ಮಂಗಳವಾರ, ಏಪ್ರಿಲ್ 20, 2021
29 °C

ಮೀಸಲಾತಿ ಹೋರಾಟಗಳಿಂದ ಅಂಬೇಡ್ಕರ್‌ ಆತ್ಮಕ್ಕೆ ಶಾಂತಿ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಮೀಸಲಾತಿಗಾಗಿ ವಿವಿಧ ಸಮಾಜದವರು ಹೋರಾಟ ನಡೆಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ಹಕ್ಕುಗಳನ್ನು ನಾವು ಹೋರಾಟ ಮಾಡಿಯಾದರೂ ಪಡೆಯಬೇಕು ಎಂಬುದು ಡಾ.ಅಂಬೇಡ್ಕರ್‌ ಅವರ ಆಶಯವಾಗಿತ್ತು. ಈಗ ಅವರ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ’ ಎಂದು  ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

‘ಕೇಳಿದ ತಕ್ಷಣಕ್ಕೆ ಮೀಸಲಾತಿ ಕೊಡಲು ಬರುವುದಿಲ್ಲ. ಅದಕ್ಕೆ ಅಧ್ಯಯನ ಮಾಡಿ ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಎಲ್ಲ ಅರ್ಹ ಸಮಾಜದವರಿಗೂ ಅವರ ಹಕ್ಕು ಲಭಿಸಲಿದೆ’ ಎಂದು ಶನಿವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ನಾನು ಹಿಂದುತ್ವ ನಂಬಿಕೊಂಡು ರಾಜಕಾರಣದಲ್ಲಿ ಬೆಳೆದಿದ್ದೇನೆ. ಈಗಲೂ ಅದನ್ನೇ ನಂಬಿ ಮುಂದುವರಿದಿದ್ದೇನೆ. ಆದರೆ, ‘ಅಹಿಂದ’ ನಂಬಿಕೊಂಡು ರಾಜಕಾರಣದಲ್ಲಿ ಮೇಲೆ ಬಂದ ಸಿದ್ದರಾಮಯ್ಯ ಈಗ ‘ಹಿಂದ’ ಎನ್ನುತ್ತಿದ್ದಾರೆ. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ವರ್ಗಗಳನ್ನೇ ಹಿಂದೆ ತಳ್ಳುತ್ತಿದ್ದಾರೆ’ ಎಂದೂ ಅವರು ಲೇವಡಿ ಮಾಡಿದರು.

‘ತಮ್ಮ ಕಾರ್ಯಕ್ರಮದಲ್ಲಿ ಚೇಲಾಗಳ ಮೂಲಕ ನನಗೆ ಧಿಕ್ಕಾರ ಕೂಗಿಸಿದ್ದಾರೆ. ಇಂಥ ಧಿಕ್ಕಾರಗಳನ್ನು ನನ್ನ ಜೀವನದಲ್ಲಿ ಬಹಳಷ್ಟು ನೋಡಿದ್ದೇನೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು