ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು:ಯುವ ಮಂಥನ ಲೇಖನ ಸ್ಪರ್ಧೆ

Last Updated 1 ಡಿಸೆಂಬರ್ 2022, 4:36 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಹಾಗೂ ಬುಕ್ ಬ್ರಹ್ಮ ಸಂಸ್ಥೆ ಜಂಟಿಯಾಗಿ ‘ಕುವೆಂಪು: ಯುವ ಮಂಥನ’ ಲೇಖನ ಸ್ಪರ್ಧೆ ಆಯೋಜಿಸಿವೆ.

ಕುವೆಂಪು ಅವರ ನಾಡು–ನುಡಿ ಚಿಂತನೆ, ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ದೃಷ್ಟಿ, ಆಧ್ಯಾತ್ಮಿಕ ಮನೋಧರ್ಮಗಳನ್ನು ಅರಿಯುವ ಬಗೆಗಳನ್ನು ಈ ಲೇಖನಗಳು ಒಳಗೊಂಡಿರಬೇಕು. ಲೇಖನಗಳು ವಿಮರ್ಶಾತ್ಮಕ ಒಳನೋಟಗಳನ್ನು ಹೊಂದಿರಬೇಕು. 2 ಸಾವಿರ ಪದಗಳನ್ನು ಮೀರಬಾರದು. 35 ವರ್ಷದೊಳಗಿನ ಲೇಖಕರು ಎಲ್ಲಿಯೂ ಪ್ರಕಟವಾಗದ ಲೇಖನ ಕಳುಹಿಸಬೇಕು.

ಮೊದಲ ಬಹುಮಾನ ₹5 ಸಾವಿರ ನಗದು ಮತ್ತು ₹3 ಸಾವಿರ ಮೊತ್ತದ ಪುಸ್ತಕ, ಎರಡನೇ ಬಹುಮಾನ ₹3 ಸಾವಿರ ಮತ್ತು ₹2 ಸಾವಿರ ಮೊತ್ತದ ಪುಸ್ತಕ, ಮೂರನೇ ಬಹುಮಾನ ₹2 ಸಾವಿರ ಮತ್ತು ₹1 ಸಾವಿರ ಮೊತ್ತದ ಪುಸ್ತಕ ನೀಡಲಾಗುವುದು.

ಕುವೆಂಪು ಅವರ ವಿಚಾರಕ್ರಾಂತಿಗೆ ಆಹ್ವಾನ, ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ, ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ, ಸಂಸ್ಕೃತಿ ಕರ್ನಾಟಕ, ಜನತಾಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ, ವಿದ್ಯಾರ್ಥಿಗಳಿಗೇಕೆ ಸಾಹಿತ್ಯ, ಪ್ರಾದೇಶಿಕ ವೈಶಿಷ್ಟ್ಯದ ರಕ್ಷಣೆ, ಬಹುಜಿಹ್ವಾ ಭಾರತಿಗೆ ಏಕತೆಯ ಆರತಿ ಲೇಖನಗಳನ್ನು ಆಧರಿಸಿ ಲೇಖನ ಸಿದ್ಧಪಡಿಸಬೇಕು. ಆಯ್ದ ಅತ್ಯುತ್ತಮ ಲೇಖನಗಳನ್ನು ಮುಂದೆ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.

ಡಿ.15ರೊಳಗೆ ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ, ಮೂರನೇ ಮಹಡಿ, ಆರ್.ಕೆ ಕಾಂಪ್ಲೆಕ್ಸ್, ಕೆಎಸ್‌ಎಸ್‌ಐಡಿಸಿ ಕಾಂಪೌಂಡ್, ಎಲೆಕ್ಟ್ರಾನಿಕ್ಸ್ ಸಿಟಿ ಫೇಸ್-1, ಬೆಂಗಳೂರು– 560100(ಮೊಬೈಲ್‌ ನಂಬರ್ : 7892608118, ಇಮೇಲ್ ಐಡಿ: nimagaagi@bookbrahma.com) ಲೇಖನಗಳನ್ನು ತಲುಪಿಸಬೇಕು ಎಂದು ಬುಕ್‌ ಬ್ರಹ್ಮ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT