ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾಕರ್‌ ಅವರೇ, ವೆಂಟಿಲೇಟರ್ ಕೊರತೆ ನೀಗಿಸಲು ಇನ್ನೆಷ್ಟು ದಿನ ಬೇಕು?: ಕಾಂಗ್ರೆಸ್

Last Updated 16 ಸೆಪ್ಟೆಂಬರ್ 2021, 6:51 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರೇ, ರಾಜ್ಯದಲ್ಲಿ ವೇಂಟಿಲೇಟರ್ ಕೊರತೆ ನೀಗಿಸಲು ಇನ್ನೆಷ್ಟು ದಿನ ಬೇಕು? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ರಾಜ್ಯದ ವೈದ್ಯಕೀಯ ಕ್ಷೇತ್ರದ ದುರಾವಸ್ಥೆಯ ಬಗ್ಗೆ ಬಿಜೆಪಿ ಶಾಸಕರೇ ಆರೋಗ್ಯ ಸಚಿವರಿಗೆ ತರಾಟೆ ತೆಗೆದುಕೊಳ್ಳುವ ಮೂಲಕ ತೆರೆದಿಟ್ಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದೆ.

‘ಸುಧಾಕರ್‌ ಅವರೇ, ಕೊರೊನಾ ತಗ್ಗಿದ ಸಮಯದಲ್ಲಿಯೇ ವೆಂಟಿಲೇಟರ್ ಕೊರತೆ ಇದೆ ಎಂದರೆ ಕೊರೊನಾ ಸಮಯದಲ್ಲಿನ ಕೊರತೆಯಿಂದಾದ ಸಾವು, ನೋವು ಸಂಭವಿಸಿರಬಹುದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಪ್ರತಿನಿತ್ಯ ಪ್ರಧಾನಿ ಮೋದಿ ಅವರ ಮುಖಸ್ತುತಿಯಲ್ಲಿ ತೊಡಗುವ ಬಿಜೆಪಿಗರು ಕೇಂದ್ರದ ವಿಷಯ ನಮ್ಮನ್ನೇಕೆ ಕೇಳುತ್ತಿದ್ದೀರಿ ಎನ್ನುವ ಮೂಲಕ ಸದನದಲ್ಲಿ ಬೆಲೆ ಏರಿಕೆಯ ಚರ್ಚೆಯಿಂದ ಪಲಾಯನ ಮಾಡಲು ಯತ್ನಿಸುತ್ತಿದೆ. ಮೋದಿ ಮುಖ ತೋರಿಸಿ ಮತ ಪಡೆದ ಬಿಜೆಪಿಗರು ಇಂದು ಮೋದಿಯವರು ನಿರ್ಮಿಸಿದ ಅನಾಹುತಗಳಿಗೆ ಉತ್ತರಿಸಲಾಗದೆ ಜಾರಿಕೊಳ್ಳುವುದು ಹಾಸ್ಯಾಸ್ಪದ’ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT