ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌: ವಾಹನ, ಪ್ರವೇಶ ದರ ಏರಿಕೆ

Last Updated 1 ಫೆಬ್ರುವರಿ 2021, 18:33 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ ಉದ್ಯಾನಕ್ಕೆ ಪ್ರವೇಶ ದರ ಹಾಗೂ ವಾಹನ ನಿಲುಗಡೆ ಶುಲ್ಕಗಳನ್ನು ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳು ಮಂಗಳವಾರದಿಂದಲೇ ಜಾರಿಯಾಗಲಿದೆ.

ಒಬ್ಬರು ವಯಸ್ಕರಿಗೆ ಪ್ರವೇಶ ದರ ₹25 ಇತ್ತು. ಈಗ ₹30ಕ್ಕೆ ಏರಿಕೆ ಮಾಡಲಾಗಿದೆ. ಮಕ್ಕಳಿಗೆ ಉದ್ಯಾನದಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಈಗ 6ರಿಂದ 12 ವರ್ಷದೊಳಗಿನ ಮಕ್ಕಳಿಗೂ ₹10 ಹಾಗೂ 12 ವರ್ಷ ಮೇಲ್ಪಟ್ಟವರಿಗೆ ₹30 ಪ್ರವೇಶ ದರ ನಿಗದಿಪಡಿಸಲಾಗಿದೆ.

‘ದೇಶದ ಇತರೆ ಉದ್ಯಾನಗಳಲ್ಲಿ ಪ್ರವೇಶ ಶುಲ್ಕ ₹50 ಇದೆ. ಆದರೆ, ಸಾರ್ವಜನಿಕರಿಗೆ ಹೊರೆಯಾಗದಂತೆ ಕೇವಲ ₹5 ಮಾತ್ರ ಹೆಚ್ಚಿಸಲಾಗಿದೆ. ಈ ಕುರಿತುಸಮಿತಿ ಸಭೆಯಲ್ಲಿ ಚರ್ಚಿಸಿ, ತೀರ್ಮಾನಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಜಿ.ಕುಸುಮಾ ತಿಳಿಸಿದರು.

ವಾಹನಗಳ ನಿಲುಗಡೆ ಶುಲ್ಕಗಳೂ ತಲಾ ₹5ರೂ ಏರಿಕೆಯಾಗಿದ್ದು, ಮೂರು ಗಂಟೆಗಳ ಅವಧಿಗೆ ಈಗಿರುವ ದರಕ್ಕಿಂತ ಹೆಚ್ಚುವರಿ ₹5 ಪಾವತಿಸಬೇಕು. ಮೂರು ಗಂಟೆಗಳ ನಂತರ ಪ್ರತಿ ಗಂಟೆಗೆ₹5ರಿಂದ ₹25ರವರೆಗೆ ದರ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT