ಮಂಗಳವಾರ, ಅಕ್ಟೋಬರ್ 26, 2021
23 °C

ರಾಜತಾಂತ್ರಿಕ ಕೌಶಲಗಳಿಂದ ದೇಶಗಳ ಯಶಸ್ಸು: ಅನಿರುದ್ಧ ರಜಪೂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಭಾರತವು ತನ್ನ ಸಾಂಸ್ಕೃತಿಕ ರಾಜತಾಂತ್ರಿಕತೆಯ ಮುಖೇನ ಇಡೀ ವಿಶ್ವದ ಮೇಲೆ ಪ್ರಭಾವ ಬೀರಿದೆ. ವಿಶ್ವವನ್ನು ಮುನ್ನಡೆಸಲು ರಾಜತಾಂತ್ರಿಕತೆ ಒಂದು ಬಲವಾದ ಸಾಧನ’ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕಾನೂನು ಆಯೋಗದ ಸದಸ್ಯ ಅನಿರುದ್ಧ ರಜಪೂತ್ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಮಾದರಿ ವಿಶ್ವಸಂಸ್ಥೆಯ ಸಮ್ಮೇಳನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಲ್ಲಿನ ಯೋಗ ಇಂದು ಬಹುತೇಕ ರಾಷ್ಟ್ರಗಳಲ್ಲಿ ಅನುಸರಿಸಲಾಗುತ್ತಿದ್ದು, ಅಂತರರಾಷ್ಟ್ರೀಯ ಯೋಗ ದಿನವಾಗಿ ಹಬ್ಬಿದೆ. ದೇಶದ ಚಲನಚಿತ್ರ ಗೀತೆಗಳನ್ನು ಬೇರೆ ದೇಶದ ಜನ ಹಾಡುತ್ತಾರೆ. ರೂಪಾಂತರಗೊಂಡಿರುವ ರಾಜತಾಂತ್ರಿಕ ಕೌಶಲಗಳಿಂದಲೇ ಇಂದು ಹಲವು ದೇಶಗಳು ಯಶಸ್ಸನ್ನು ಕಂಡಿವೆ’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್,‘ಮಾದರಿ ವಿಶ್ವಸಂಸ್ಥೆಯ ಸಮ್ಮೇಳನಕ್ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಮಾದರಿ ಸಮ್ಮೇಳನದಿಂದ ವಿಶ್ವಸಂಸ್ಥೆಯಲ್ಲಿ ಯಾವ ರೀತಿ ಚರ್ಚೆಗಳು ನಡೆಯುತ್ತವೆ? ಅಲ್ಲಿನ ವ್ಯವಸ್ಥೆಗಳ ಕುರಿತಾದ ಅನುಭವವನ್ನು ವಿದ್ಯಾರ್ಥಿಗಳು‌ ಪಡೆಯಲಿದ್ದಾರೆ’ ಎಂದು ಹೇಳಿದರು.

ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಪ್ರಾಂಶುಪಾಲ ಸುರೇಶ್‌ ವಿ.ನಾಡಗೌಡರ್, ಪ್ರೊ.ವಿ.ಸುದೇಶ್, ಪ್ರೊ.ದಶರಥ್‌, ವಿಶ್ವನಾಥ್ ಗೌಡ, ಜ್ಯೋತಿ ವಿಶ್ವನಾಥ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.