ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಹೆಚ್ಚು ಹಣ ನೀಡಲು ಪೈಪೋಟಿ– ಬೆಳ್ಳಿನಾಣ್ಯವೇ ‘ಟೋಕನ್‌’

Last Updated 7 ಡಿಸೆಂಬರ್ 2021, 20:09 IST
ಅಕ್ಷರ ಗಾತ್ರ

ಕಲಬುರಗಿ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರತಿ ಮತವು ಕನಿಷ್ಠ ₹ 20 ಸಾವಿರದಿಂದ ಗರಿಷ್ಠ ₹ 50 ಸಾವಿರದವರೆಗೆ ಬಿಕರಿಯಾಗುತ್ತಿದೆ!‌

‌ಕಲಬುರಗಿ ಜಿಲ್ಲೆಯಲ್ಲಿ ‘ಗ್ಯಾರಂಟಿ’ ಮತ್ತು ‘ನೋ ಗ್ಯಾರಂಟಿ’ ಎಂದು ಎರಡು ಭಾಗ ಮಾಡಲಾಗಿದ್ದು, ಗ್ಯಾರಂಟಿಗೆ ₹ 30 ಸಾವಿರ, ಅನುಮಾನವಿದ್ದವರಿಗೆ (ನೋ ಗ್ಯಾರಂಟಿ) ₹ 20 ಸಾವಿರ ಕೊಡಲಾಗುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ ಅಭ್ಯರ್ಥಿಗಳಿಗಿಂತ ಹೆಚ್ಚಾಗಿ ಸ್ಥಳೀಯ ಮುಖಂಡರೇ ಜಿದ್ದಿಗೆ ಬಿದ್ದಿದ್ದು, ‘ಅವರು’ ಎಷ್ಟು ಕೊಡುತ್ತಾರೋ ಅದಕ್ಕಿಂತ ‘ನಾವು’ ಹತ್ತು ಸಾವಿರ ಹೆಚ್ಚು ಕೊಡುತ್ತೇವೆ ಎಂದು ಮನೆಮನೆಗೆ ಹೋಗಿ ಹೇಳಿದ್ದಾರೆ. ಹೀಗಾಗಿ, ಇನ್ನೂ ಬಹಳ ಮತದಾರರ ಕೈಗೆ ಹಣ ಸಿಕ್ಕಿಲ್ಲ ಎನ್ನುವುದು ಮೂಲಗಳ ಮಾಹಿತಿ.

ಕೊಪ್ಪಳ ಜಿಲ್ಲೆಯಲ್ಲಿ ₹ 15ರಿಂದ ₹ 20 ಸಾವಿರ ನಗದು ಅಥವಾ ಅರ್ಧ ತೊಲ ಚಿನ್ನದುಂಗುರ ಕೊಡು
ವುದು ಈಗಾಗಲೇ ಆರಂಭವಾಗಿದೆ. ರಾಯಚೂರಿನಲ್ಲೂ ಇದೇ ದಾರಿ
ಅನುಸರಿಸುತ್ತಿದ್ದು, ಸದ್ಯಕ್ಕೆ ಯಾರಿಗೂ ಹಣ ಅಥವಾ ಚಿನ್ನಾಭರಣ ಸಂದಾಯವಾಗಿಲ್ಲ ಎನ್ನಲಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಪ್ರತಿ ಮತಕ್ಕೆ ₹ 10ರಿಂದ ₹ 15 ಸಾವಿರದಂತೆ ಹಂಚಿಕೆ ನಡೆದಿತ್ತು. ಆದರೆ, ಈ ಬಾರಿ ಹಲವು ಸದಸ್ಯರು ₹ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಗ್ರಾಮ ಪಂಚಾಯಿತಿ ಸದಸ್ಯರೊ
ಬ್ಬರು ಹೇಳಿದರು.

ಬೆಳ್ಳಿನಾಣ್ಯವೇ ‘ಟೋಕನ್‌’

ಬೀದರ್‌: ಅತಿ ಹೆಚ್ಚು ದರ ಕೇಳಿಬಂದಿರುವುದು ಬೀದರ್‌ ಜಿಲ್ಲೆಯಲ್ಲಿ. ಮತವೊಂದಕ್ಕೆ ₹ 50 ಸಾವಿರ ಕೊಡಲು ಎರಡೂ ಪಕ್ಷಗಳವರು ನಿರ್ಧರಿಸಿದ್ದಾರೆ. ಮೂರು–ನಾಲ್ಕು ಮಂದಿಯನ್ನು ಕರೆದುಕೊಂಡು ಬಂದು ಮತ ಹಾಕಿಸುವವರಿಗೆ ₹ 10 ಸಾವಿರ ಹೆಚ್ಚುವರಿ ಬಕ್ಷೀಸು ಇದೆ. ಹಣ ಕೊಡಲು ಸುಲಭವಾಗಲಿ ಎಂಬ ಕಾರಣಕ್ಕೆ ಕೆಲವರು ‘ಟೋಕನ್‌’ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.

ಮತದಾರರಾಗಿರುವ ಪುರುಷರಿಗೆ ಒಂದು ಬೆಳ್ಳಿನಾಣ್ಯ, ಮಹಿಳೆಯರಿಗೆ ಒಂದು ಸೀರೆ ಈಗಾಗಲೇ ಕೊಡಲಾಗಿದೆ. ಮತದಾನದ ಹಿಂದಿನ ದಿನ ಈ ‘ಟೋಕನ್‌’ಗಳನ್ನು ತೋರಿಸಿದವರಿಗೆ ಹಣ ಕೊಡುವ ಸಿದ್ಧತೆ ನಡೆದಿದೆ ಎಂದು ಮೂಲಗಳು ಹೇಳಿವೆ.

‘ಈ ಬೆಳ್ಳಿನಾಣ್ಯಗಳ ಮೇಲೆ ಮರಾಠಿ ಅಕ್ಷರಗಳಿವೆ. ಅಧಿಕಾರಿಗಳ ಕಣ್ಣು ತಪ್ಪಿಸುವ ಉದ್ದೇಶದಿಂದ ಮಹಾರಾಷ್ಟ್ರದಲ್ಲಿ ಸಿದ್ಧಪಡಿಸಿರಬಹುದು’ ಎಂಬುದು ಅದನ್ನು ಪಡೆದುಕೊಂಡ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT