ಸೋಮವಾರ, ಡಿಸೆಂಬರ್ 6, 2021
23 °C

ವಿಧಾನ ಪರಿಷತ್‌ ಚುನಾವಣೆ| ಯಡೂರಪ್ಪ ಆಸ್ತಿ ₹ 33 ಲಕ್ಷ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪಿ.ಎಸ್.ಯಡೂರಪ್ಪ ಎಂಬ ಹೆಸರಿನ ವ್ಯಕ್ತಿ ದ್ವಿಸದಸ್ಯ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದು, ₹ 33 ಲಕ್ಷ ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ (ಪತ್ನಿ ಪಾಲು ಸೇರಿ) ಹೊಂದಿದ್ದಾರೆ. ಪಿರಿಯಾಪಟ್ಟಣದ 67 ವರ್ಷ ವಯಸ್ಸಿನ ಇವರು ಹಿಂದಿನ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ.

ಏನೂ ಇಲ್ಲ

ಸರಗೂರು ತಾಲ್ಲೂಕಿನ ಮೂಳ್ಳೂರು ಗ್ರಾಮದ ಗುರುಲಿಂಗಯ್ಯ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಪ್ರಮಾಣಪತ್ರದ ಎಲ್ಲಾ ಕಾಲಂಗಳಲ್ಲಿ ‘ಇಲ್ಲ’ ಎಂದು ನಮೂದಿಸಿದ್ದಾರೆ. ಕೈಯಲ್ಲೂ, ಬ್ಯಾಂಕ್‌ನಲ್ಲೂ ಹಣವಿಲ್ಲ, ಸ್ವಯಾರ್ಜಿತ, ಪಿತ್ರಾರ್ಜಿತ ಆಸ್ತಿ ಇಲ್ಲ ಎಂದು ಬರೆದಿದ್ದಾರೆ. ಸಮಾಜ ಸೇವೆ ಮಾಡುವುದಾಗಿ ನಮೂದಿಸಿದ್ದಾರೆ.

ಪಕ್ಷೇತರರಾಗಿ ಕಣಕ್ಕಿಳಿದಿರುವ ಮೈಸೂರಿನ 67 ವರ್ಷದ ಕೆ.ಸಿ.ಬಸವರಾಜಸ್ವಾಮಿ ₹ 65 ಸಾವಿರ ಚರಾಸ್ತಿ ಇರುವುದಾಗಿ ನಮೂದಿಸಿದ್ದಾರೆ. ಪತ್ನಿ ಬಳಿ ₹ 2 ಲಕ್ಷ ಮೌಲ್ಯದ 400 ಗ್ರಾಂ ಚಿನ್ನವಿದೆ ಎಂಬುದನ್ನು ಪ‍್ರಮಾಣಪತ್ರದಲ್ಲಿ ತೋರಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ 41 ವರ್ಷದ ಆರ್‌.ಮಂಜುನಾಥ್‌, ₹ 5.30 ಲಕ್ಷದ ಚರಾಸ್ತಿ, ವಾಣಿಜ್ಯ ಕಟ್ಟಡ, ವಸತಿ ಕಟ್ಟಡ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು