ಶನಿವಾರ, ಜುಲೈ 24, 2021
20 °C

ಕರ್ನಾಟಕ ಶಾಸ್ತ್ರೀಯ ಸಂಗೀತ ಜನರನ್ನು ತಲುಪಲಿ: ಡಾ.ನಾಗೇಶ್‌ ವಿ.ಬೆಟ್ಟಕೋಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಿಂದೂಸ್ತಾನಿ ಸಂಗೀತದಂತೆ ಕರ್ನಾಟಕ ಶಾಸ್ತ್ರೀಯ ಸಂಗೀತವೂ ಜನಸಾಮಾನ್ಯರನ್ನು ತಲುಪ‌ಬೇಕು. ಅದಕ್ಕಾಗಿ ವಿಚಾರ ಸಂಕಿರಣಗಳು ಹಾಗೂ ಸಂವಾದಗಳನ್ನು ಹೆಚ್ಚಾಗಿ ಆಯೋಜಿಸಬೇಕು’ ಎಂದು ಮೈಸೂರಿನ ಗಂಗೂಬಾಯಿ ಹಾನಗಲ್‌ ಸಂಗೀತ ಹಾಗೂ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ನಾಗೇಶ್‌ ವಿ.ಬೆಟ್ಟಕೋಟೆ ತಿಳಿಸಿದರು.

ವಿಶ್ವ ಸಂಗೀತ ದಿನದ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗವು ಆನ್‌ಲೈನ್ ಮೂಲಕ ಸೋಮವಾರ ಹಮ್ಮಿಕೊಂಡಿದ್ದ ‘ಸಂಗೀತ ‌ವಿಚಾರಗೋಷ್ಠಿ’ಯಲ್ಲಿ ಅವರು ಮಾತನಾಡಿದರು.

‘ಸಂಗೀತ ಮತ್ತು ಯೋಗ ಭಾರತೀಯ ಸಂಸ್ಕೃತಿಯ ಮೂಲ ‌ಬೇರುಗಳು. ಇತ್ತೀಚಿನ ದಿನಗಳಲ್ಲಿ ಸಂಗೀತ ಹಾಗೂ ಯೋಗವೂ ಚಿಕಿತ್ಸೆಗಳಾಗಿ ಬದಲಾಗಿದ್ದು, ಇವುಗಳಿಂದ ಜನ ಹೆಚ್ಚು ಪ್ರಯೋಜನ ಪಡೆಯುತ್ತಿದ್ದಾರೆ’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್, ‘ಸಂಗೀತ ಹಾಗೂ ಯೋಗ ದಿನಗಳನ್ನು ಒಂದೇ ದಿನ ಆಚರಿಸಲಾಗುತ್ತಿದೆ. ಸಂಗೀತ ಮನಸ್ಸಿನ ಆರೋಗ್ಯವಾದರೆ, ಯೋಗ ಶರೀರದ ಆರೋಗ್ಯ. ಸಂಗೀತ ನಾರದರಿಂದ ಬಂದರೂ ಅದಕ್ಕೆ ಗ್ರೀಕ್‌ನಿಂದ ಅಡಿಪಾಯ ಸಿಕ್ಕಿದೆ. ಸಂಗೀತದಿಂದ ಮನಸ್ಸಿನ ದುಗುಡಗಳು ದೂರವಾಗಿ, ನೆಮ್ಮದಿ ನೆಲೆಸುತ್ತದೆ’ ಎಂದು ಹೇಳಿದರು.

ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ ಎಂ.ಆರ್.ವಿ.ಪ್ರಸಾದ್,‘ ವಿಶ್ವ ಸಂಗೀತ ದಿನವನ್ನು ದೇಶದಲ್ಲಿ ಮೊದಲು ಆಚರಿಸುತ್ತಿರಲಿಲ್ಲ. ಇದು, ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದೆ’ ಎಂದರು.

ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥೆ ಪ್ರೊ.ಹಂಸಿನಿ ನಾಗೇಂದ್ರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.