ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ: ಪಾರ್ಕಿಂಗ್‌ಗೆ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ವ್ಯವಸ್ಥೆ

ಹಾವೇರಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ವಿನೂತನ ಕ್ರಮ
Last Updated 3 ಜನವರಿ 2023, 14:35 IST
ಅಕ್ಷರ ಗಾತ್ರ

ಹಾವೇರಿ: ನಗರದಲ್ಲಿ ಜನವರಿ 6 ರಿಂದ 8ರವರೆಗೆ ಮೂರು ದಿನಗಳ ಕಾಲ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ಸುಗಮ ಸಂಚಾರಕ್ಕಾಗಿ ಜ.6 ರಿಂದ ಜ.8ರವರೆಗೆ ದೈನಂದಿನ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ದಾವಣಗೆರೆ ಮಾರ್ಗವಾಗಿ ಬರುವ ವಾಹನಗಳು ತೋಟದ ಯಲ್ಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ-48ರ ಕೆಳ ಸೇತುವೆ ಸರ್ವಿಸ್ ರಸ್ತೆ ಮುಖಾಂತರ ಹಳೇ ಪಿಬಿ ರಸ್ತೆ ನಗರ ಪ್ರವೇಶ ಮಾಡಬೇಕು. ನಂತರ ಗುತ್ತಲ ವೃತ್ತ, ಸಿದ್ದಪ್ಪ ವೃತ್ತದ ಮೂಲಕ ಹಾನಗಲ್ ಕೆಳಸೇತುವೆ ಮೂಲಕ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ-48 ಸೇರಬೇಕು.

ಹುಬ್ಬಳ್ಳಿ ಮಾರ್ಗವಾಗಿ ಬರುವ ವಾಹನಗಳು ದೇವಗಿರಿ ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ ಮುಖಾಂತರ ಹಾನಗಲ್ ರಸ್ತೆ ಕೆಳ ಸೇತುವೆ ಮುಖಾಂತರ ಹಾವೇರಿ ನಗರ ಪ್ರವೇಶಮಾಡಿ, ಸಿದ್ದಪ್ಪ ವೃತ್ತ ಮೂಲಕ ಹಳೇ ಪಿಬಿ ರಸ್ತೆ ಮುಖಾಂತರ ತೋಟದಯಲ್ಲಾಪುರದ ಬಳಿಯ ರಾಷ್ಟ್ರೀಯ ಹೆದ್ದಾರಿ-48ರ ಕೆಳ ಸೇತುವೆ ಸರ್ವಿಸ್ ರಸ್ತೆ ಮುಖಾಂತರ ಸಂಚರಿಸಿ ದಾವಣಗೆರೆ ಮಾರ್ಗವಾಗಿ ಹೋಗಬೇಕು.

ಈ ರಸ್ತೆ ಮಾರ್ಗದಲ್ಲಿ ಸುಗಮ ಸಂಚಾರ ಹಿತದೃಷ್ಟಿಯಿಂದ ಹಾವೇರಿ ನಗರಕ್ಕೆ ಬರುವ ಮತ್ತು ಹೋಗುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಮೇಲ್ಕಂಡ ಮಾರ್ಗಗಳಲ್ಲಿ ಸಂಚರಿಸಲು ವಾಹನ ಚಾಲಕರು ಹಾಗೂ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

ಸಮ್ಮೇಳನಕ್ಕೆ ಮಾರ್ಗ: ದಾವಣಗೆರೆ ಕಡೆಯಿಂದ ಬರುವ ಬಸ್ ಇತರೆ ವಾಹನಗಳು ತೋಟದ ಯಲ್ಲಾಪುರದ ಬಳಿಯ ರಾಷ್ಟ್ರೀಯ ಹೆದ್ದಾರಿ-48ರ ಮುಖಾಂತರ ದೇವಗಿರಿ ಬಳಿ ರಾಷ್ಟ್ರೀಯ ಹೆದ್ದಾರಿ-48ರ ಕೆಳ ಸೇತುವೆಯ ಸರ್ವಿಸ್ ರಸ್ತೆ ಮುಖಾಂತರ ಪೊಲೀಸ್ ಇಲಾಖೆ ಸೂಚಿಸಲಾದ ದಾವಣಗೆರೆ ವಾಹನಗಳ ನಿಲುಗಡೆ ಸ್ಥಳದಲ್ಲಿ ನಿಲುಗಡೆ ಮಾಡಿ ಸಮ್ಮೇಳನ ಸ್ಥಳಕ್ಕೆ ಬರಬೇಕು.

ಹುಬ್ಬಳ್ಳಿ ಕಡೆಯಿಂದ ಬರುವ ಬಸ್ ಹಾಗೂ ಇತರೆ ವಾಹನಗಳು ದೇವಗಿರಿ ಬಳಿಯ ಬಿ.ಎಂ.ಇಂಟರ್ ನ್ಯಾಷನಲ್ ಶಾಲೆಯ ಮುಂಭಾಗದ ಸರ್ವಿಸ್ ರಸ್ತೆ ಮುಖಾಂತರ ಕಾರ್ಯಕ್ರಮದ ಬಳಿಯ ಹುಬ್ಬಳ್ಳಿ ಮಾರ್ಗದ ಬಸ್ ನಿಲುಗಡೆ ಸ್ಥಳಕ್ಕೆ ಬರಬೇಕು.
ಗದಗ ಕಡೆಯಿಂದ ಬರುವ ಬಸ್ ಹಾಗೂ ಇತರೆ ವಾಹನಗಳು ದೇವಗಿರಿ ಗ್ರಾಮದ ಈದ್ಗಾ ಮೈದಾನ ಮುಂಭಾಗದ ರಸ್ತೆ ಮುಖಾಂತರ ದೇವಗಿರಿ ದುರ್ಗಾಭವಾನಿ ದೇವಸ್ಥಾನದ ಮುಂಭಾಗದ ರಸ್ತೆ ಮುಖಾಂತರ ರಾಷ್ಟ್ರೀಯ ಹೆದ್ದಾರಿ-48ರ ಸರ್ವಿಸ್ ರಸ್ತೆ ಮುಖಾಂತರ ಕಾರ್ಯಕ್ರಮದ ವಾಹನ ನಿಲುಗಡೆ ಸ್ಥಳಕ್ಕೆ ಆಗಮಿಸಬೇಕು.

ವಾಹನ ನಿಲುಗಡೆ ನಿಷೇಧ

ಸಮ್ಮೇಳನ ನಡೆಯುವ ಜ.6,7 ಮತ್ತು 8ರಂದು ನಗರದ ಹಳೇ ಪಿ.ಬಿ.ರಸ್ತೆ- ಸಿದ್ದಪ್ಪ ವೃತ್ತ ತಿರುವಿನ ರಸ್ತೆಯಿಂದ ಕಾರ್ಯಕ್ರಮದ ಸ್ಥಳದವರೆಗೆ ರಸ್ತೆ ಎರಡೂ ಬದಿ, ಜೆ.ಎಚ್. ಪಟೇಲ್ ರಸ್ತೆ-ಶ್ರೀ ದುಂಡಿ ಬಸವೇಶ್ವರ ದೇವಸ್ಥಾನ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ರಸ್ತೆಯ ಎರಡೂ ಬದಿ, ಪಿಬಿ ರಸ್ತೆ-ಸಿದ್ದಪ್ಪ ವೃತ್ತದಿಂದ ತೋಟದ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ-48ರವರೆಗೆ ರಸ್ತೆಯ ಎರಡೂ ಬದಿ ಹಾಗೂ ಹಾನಗಲ್ ರಸ್ತೆ- ಸಿದ್ದಪ್ಪ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ-48 ಕೆಳ ಸೇತುವೆಯವರೆಗೆ ರಸ್ತೆಯ ಎರಡೂ ಬದಿ ತಾತ್ಕಾಲಿಕವಾಗಿ ವಾಹನಗಳ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪಾರ್ಕಿಂಗ್‌ಗೆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ’

ಸಾಹಿತ್ಯ ಸಮ್ಮೇಳನಕ್ಕೆ ಬರುವ ವಿವಿಧ ಜಿಲ್ಲೆಗಳ ಸಾಹಿತ್ಯಾಸಕ್ತರು ಸಮ್ಮೇಳನದ ಸ್ಥಳ, ಪಾರ್ಕಿಂಗ್‌ ವ್ಯವಸ್ಥೆ, ಯಾವ ಮಾರ್ಗದಲ್ಲಿ ಬರಬೇಕು ಎಂಬ ಮಾಹಿತಿಯನ್ನು ತಿಳಿಯಲು ಹಾವೇರಿ ಜಿಲ್ಲಾ ಪೊಲೀಸ್‌ ಇಲಾಖೆ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಸೌಲಭ್ಯ ಕಲ್ಪಿಸಿದೆ. ಸ್ಕ್ಯಾನ್‌ ಮಾಡಿದರೆ ಸುಲಭವಾಗಿ ಸಮ್ಮೇಳನದ ವೇದಿಕೆಗೆ ಬರಬಹುದು ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT