ಶುಕ್ರವಾರ, ಆಗಸ್ಟ್ 12, 2022
25 °C
ಎರಡನೇ ಹಂತದ ಲಾಕ್‌ಡೌನ್‌ ಸಡಿಲಿಕೆ| ನೈಟ್‌ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಮುಂದುವರಿಕೆ| ಈ ಹೊಸ ಮಾರ್ಗಸೂಚಿಗಳು ಜುಲೈ 5ರ ವರೆಗೆ ಜಾರಿಯಲ್ಲಿ

ಲಾಕ್‌ಡೌನ್‌ ಮತ್ತಷ್ಟು ಸಡಿಲಿಕೆ: ಯಾವುದಕ್ಕೆ ಅನುಮತಿ, ಯಾವುದಕ್ಕೆ ಇಲ್ಲ?  

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರವು ಶನಿವಾರ ಎರಡನೇ ಹಂತದ ಲಾಕ್‌ಡೌನ್‌ ಸಡಿಲಿಕೆ ಘೋಷಣೆ ಮಾಡಿದೆ. ಜುಲೈ 5ರ ವರೆಗೆ ಈ ಹೊಸ ಮಾರ್ಗಸೂಚಿ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ.  

 ಶೇ. 5ಕ್ಕಿಂತಲೂ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ಸಡಿಲಿಕೆ ಮಾಡಲಾಗಿದೆ. ಆದರೆ, ಶೇ. 5 ಮತ್ತು 10ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಿಗೆ ಈ ಹಿಂದಿನ ಮಾರ್ಗಸೂಚಿಗಳೇ ಅನ್ವಯವಾಗಲಿದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್‌ವೈ, ‘16 ಜಿಲ್ಲೆಗಳಲ್ಲಿ ಶೇ. 5ರಷ್ಟು, 13 ಜಿಲ್ಲೆಗಳಲ್ಲಿ ಶೇ. 5–10, ಮೈಸೂರಿನಲ್ಲಿ ಶೇ. 10ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇದೆ,’ ಎಂದು ಸಿಎಂ ತಿಳಿಸಿದರು. 

ಶೇ. 5ರಷ್ಟು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಹೆಚ್ಚು ಸಡಿಲಿಕೆ 

ಶೇ. 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ (ಬಿ.ಬಿ.ಎಂ.ಪಿ ಸೇರಿದಂತೆ), ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳಿಗೆ ಈ ಕೆಳಗಿನ ಮಾರ್ಗಸೂಚಿ ಅನ್ವಯ ಆಗಲಿದೆ.  

–ಎಲ್ಲ ಅಂಗಡಿಗಳು ಸಂಜೆ 5ರ ವೆರೆಗೆ ತೆರೆದಿರಲು ಅವಕಾಶ ನೀಡಲಾಗಿದೆ. 
– ಎಸಿ ಚಾಲನೆ ಇಲ್ಲದೇ ಹೋಟೆಲ್‌, ಕ್ಲಬ್‌, ರೆಸ್ಟೋರೆಂಟ್‌ಗಳಲ್ಲಿ (ಮಧ್ಯಪಾನವಿಲ್ಲದೇ) ಕುಳಿತು ಆಹಾರ ಸೇವಿಸಲು ಸಂಜೆ 5 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ಶೇ. 50ರ ಆಸನಗಳಲ್ಲಿ ಮಾತ್ರ ಅವಕಾಶ. 
– ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ 
– ಬಸ್‌, ಮೆಟ್ರೋ ಶೇ.50ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದು. 
– ಹೊರಾಂಗಣ ಕ್ರೀಡಾಂಗಣದಲ್ಲಿ ವೀಕ್ಷಕರಿಲ್ಲದೇ ಕ್ರೀಡೆಗೆ ಅವಕಾಶ. 
– ಸರ್ಕಾರ ಕಚೇರಿಗಳು ಶೇ.50ರ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದು. 
– ಲಾಡ್ಜ್‌, ರೆಸಾರ್ಟ್‌ಗಳಲ್ಲಿ ಶೇ. 50 ಸಾಮರ್ಥ್ಯದೊಂದಿಗೆ ಗ್ರಾಹಕಸೇವೆ. ಜಿಮ್‌ಗಳಲ್ಲಿ ಶೇ. 50ರಷ್ಟು ಮಂದಿಗೆ ಅವಕಾಶ ನೀಡಲಾಗಿದೆ. ಎಸಿ ಬಳಸುವಂತಿಲ್ಲ. 

ಈ ಜಿಲ್ಲೆಗಳಲ್ಲಿ ಹಿಂದಿನ ಮಾರ್ಗಸೂಚಿ ಮುಂದುವರಿಕೆ 

ಶೇ. 5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಹಾಸನ, ಉಡುಪಿ, ದ ಕನ್ನಡ,  ಶಿವಮೊಗ್ಗ,  ಚಾಮರಾಜನಗರ,  ಚಿಕ್ಕಮಗಳೂರು,  ಬೆಂಗಳೂರು ಗ್ರಾ,  ದಾವಣಗೆರೆ,  ಕೊಡಗು, ಧಾರವಾಡ, ಬಳ್ಳಾರಿ,  ಚಿತ್ರದುರ್ಗ, ವಿಜಯಪುರಲ್ಲಿ ಜೂನ್‌ 11ರಂದು ತಿಳಿಸಿದ ಮಾರ್ಗಸೂಚಿಗಳು ಮುಂದುವರಿಯಲಿವೆ.  

ಈ 13 ಜಿಲ್ಲೆಗಳಲ್ಲಿ ಈಗ ಇರುವಂತೆ ಮಧ್ಯಾಹ್ನ 2ಗಂಟೆವರೆಗೆ ಅಂಗಡಿ ವಹಿವಾಟಿಗೆ ಅವಕಾಶ.

ಶೇ. 10ರಷ್ಟು ಇರುವ ಮೈಸೂರಿನಲ್ಲಿ ಈಗಿನ ನಿರ್ಬಂಧಗಳು ಮುಂದುವರಿಯಲಿವೆ. 

ನೈಟ್‌ ಕರ್ಫ್ಯೂ ಮುಂದುವರಿಕೆ  

ರಾಜ್ಯವ್ಯಾಪಿ ಅನ್ವಯ ಆಗುವಂತೆ ನೈಟ್‌ ಕರ್ಫ್ಯೂ ರಾತ್ರಿ 7ರಿಂದ ಬೆಳಗ್ಗೆ 5ರ ವರೆಗೆ ಜಾರಿಯಲ್ಲಿರಲಿದೆ. ವಾರಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ. 

ನಿರ್ಬಂಧ ಯಾವುದಕ್ಕೆ? 

ಈಜುಕೊಳ, ಸಭೆ ಸಮಾರಂಭ, ರಾಜಕೀಯ ಕಾರ್ಯಕ್ರಮ, ಪೂಜಾ ಸ್ಥಳ, ಶಿಕ್ಷಣ ಸಂಸ್ಥೆ, ಸಿನಿಮಾ ಮಂದಿರ, ಶಾಪಿಂಗ್ ಮಾಲ್‌, ಪಬ್‌, ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳಿಗೆ ನಿರ್ಬಂಧ ಮುಂದುವರಿಕೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು