ಭಾನುವಾರ, ಮೇ 22, 2022
22 °C

ಸಮಸ್ಯೆಗಳ ಸಾರ್ವಜನಿಕ ಚರ್ಚೆ ಸರಿಯಲ್ಲ: ಯತ್ನಾಳಗೆ ಸಚಿವ ಮಾಧುಸ್ವಾಮಿ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ; 'ಸಮಸ್ಯೆಗಳು ಎಲ್ಲ ಕಡೆ ಇರುತ್ತವೆ. ನಮ್ಮಲ್ಲೂ ಅನೇಕ ಸಮಸ್ಯೆ ಭಿನ್ನಾಭಿಪ್ರಾಯ ಇರಬಹುದು. ಅವುಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸರಿ ಅಂತ ಅನಿಸೊಲ್ಲ' ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಬಗ್ಗೆ ಮಾಧ್ಯಮದವರು ಮಂಗಳವಾರ ಇಲ್ಲಿ ಗಮನ ಸೆಳೆದಾಗ  ಮೇಲಿನಂತೆ ಪ್ರತಿಕ್ರಿಯಿಸಿದರು.

ಯುಗಾದಿ ಹಬ್ಬದ ನಂತರ ಸಿಎಂ ಬದಲಾಗ್ತಾರೆ ಎಂಬ ಯತ್ನಾಳ್ ಹೇಳಿಕೆಗೆ ಉತ್ತರಿಸಿದ ಅವರು, ಯತ್ನಾಳ ಕೇಂದ್ರ ಮಂತ್ರಿಯಾದಂತವರು. ಹೈಕಮಾಂಡ್ ಜೊತೆನಮಗಿಂತ ಹೆಚ್ಚು ಸಂಪರ್ಕ ಇದ್ದಂತವರು. ಅವರ ಬಗ್ಗೆ ನಾನ್ಯಾಕೆ ಹೇಳಲಿ ಎಂದರು.

’ಅಷ್ಟಕ್ಕೂ ಯತ್ನಾಳ ಮಾತನಾಡುವುದು ಸರಿ ಅಥವಾ ತಪ್ಪು ಎಂದು ನಾನ್ಯಾಕೆ ವಿಮರ್ಶೆ ಮಾಡಲಿ‘ ಎಂದು ಮರು ಪ್ರಶ್ನಿಸಿದ ಮಾಧುಸ್ವಾಮಿ, ಅದಕ್ಕೆ ಉತ್ತರ ಕೊಡುವಷ್ಟು ಸಮರ್ಥ ನಾನಲ್ಲ. ನನ್ನ ಖಾತೆಯಲ್ಲಿ ಸಿಎಂ ಪುತ್ರ ವಿಜಯೇಂದ್ರ ಅಥವಾ ಬೇರೆ ಯಾರೂ ಹಸ್ತಕ್ಷೇಪ ಮಾಡುತ್ತಿಲ್ಲ. ಬಹುಶಃ ಯಾರೂ ಮಾಡೋದು ಇಲ್ಲ ಎಂದು ಭಾವಿಸಿದ್ದೇನೆ. ಹಾಗೆ ಮಾಡಿದರೆ ಸಹಿಸಿಕೊಳ್ಳುವವರಲ್ಲ ನಾವು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು