ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Maha Shivaratri| ನಾಡಿನ ಜನತೆಗೆ ಜನನಾಯಕರ ಶಿವರಾತ್ರಿ ಸಂದೇಶವಿದು...

Last Updated 11 ಮಾರ್ಚ್ 2021, 8:25 IST
ಅಕ್ಷರ ಗಾತ್ರ

ಬೆಂಗಳೂರು: ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ರಾಜಕೀಯ ನಾಯಕರು ಜನರಿಗೆ ಶುಭಾಶಯ ಕೋರಿದ್ದಾರೆ.

'ಸಂಕಷ್ಟ, ನೋವು, ರೋಗಗಳಿಂದ ಜಗತ್ತನ್ನು ಪಾರುಮಾಡಿ, ಆ ಪರಮೇಶ್ವರನು ಸರ್ವರಿಗೂ ಮಂಗಳವನ್ನು ಮಾಡಲಿ,' ಎಂದು ಸಿಎಂ ಯಡಿಯೂರಪ್ಪ ಕೋರಿದ್ದಾರೆ. ಶಿವ ಸರಳತೆ, ಪ್ರಾಮಾಣಿಕತೆಯ ಪ್ರತೀಕ ಎಂದು ಮಾಜಿ ಪ್ರಧಾನಿ ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.

'ವಿಶ್ವದ ಹಿತಕ್ಕಾಗಿ ನಂಜನ್ನೇ ಉಂಡ ನಂಜುಂಡನ ಆಶೀರ್ವಾದ ಎಲ್ಲರಿಗೂ ಸಿಗಲಿ,' ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಆಶಿಸಿದ್ದರೆ, 'ಕಲ್ಯಾಣವೆಂಬುದು ಬಸವನಿಳೆಯ ಬೆಳೆಯಾಗಲಿ,' ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

***

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ಸಂಕಷ್ಟ, ನೋವು, ರೋಗಗಳಿಂದ ಜಗತ್ತನ್ನು ಪಾರುಮಾಡಿ, ಆ ಪರಮೇಶ್ವರನು ಸರ್ವರಿಗೂ ಮಂಗಳವನ್ನು, ಆರೋಗ್ಯವನ್ನು ಮತ್ತು ಸುಖವನ್ನು ಕರುಣಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸೋಣ.

- ಬಿ.ಎಸ್‌ ಯಡಿಯೂರಪ್ಪ, ಮುಖ್ಯಮಂತ್ರಿ

***

ಶಿವ ಸರಳತೆ, ಪ್ರಾಮಾಣಿಕತೆ, ನಿಷ್ಕಲ್ಮಶ ಮನಸ್ಸಿನ ಪ್ರತೀಕ. ಈಶ್ವರನು ಎಲ್ಲಾ ಆಡಂಬರಗಳಿಂದ ಮುಕ್ತವಾಗಿರುವ ಅಮೋಘ ಶಕ್ತಿ ಸ್ವರೂಪಿಯಾಗಿದ್ದು, ಈ ಮಹಾ ಶಿವರಾತ್ರಿಯಂದು ಎಲ್ಲರಿಗೂ ಶಿವನ ಆಶೀರ್ವಾದ ದೊರಕಲಿ. ಸರ್ವರಿಗೂ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು.

- ಎಚ್‌.ಡಿ ದೇವೇಗೌಡ, ಮಾಜಿ ಪ್ರಧಾನ ಮಂತ್ರಿ

***

ಮಂಗಳಕರವಾದ ಮಹಾ ಶಿವರಾತ್ರಿಯು ಜನರ ಸಂಕಷ್ಟಗಳನ್ನು ಕಳೆದು ಕಲ್ಯಾಣವನ್ನುಂಟು ಮಾಡಲಿ. ಕಲ್ಯಾಣವೆಂಬುದು ಬಸವನಿಳೆಯ ಬೆಳೆಯಾಗಲಿ. ನಾಡ ಬಾಂಧವರಿಗೆ ಮಹಾ ಶಿವರಾತ್ರಿಯ ಶುಭಹಾರೈಕೆಗಳು.

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

***

ವಿಶ್ವದ ಸಕಲವೂ ಆಗಿರುವ ಶಿವನ ಆರಾಧನೆಯ ದಿನವಾದ ಈ ದಿನ ಎಲ್ಲರಿಗೂ ಶುಭಾಶಯ ಕೋರುತ್ತೇನೆ. ವಿಶ್ವದ ಹಿತಕ್ಕಾಗಿ ನಂಜನ್ನೇ ಉಂಡ ನಂಜುಂಡನ ಆಶಿರ್ವಾದ ಎಲ್ಲರಿಗೂ ಸಿಗಲಿ ಎಂದು ನಾನು ಈ ಸಂದರ್ಭದಲ್ಲಿ ಆಶಿಸುತ್ತೇನೆ.

- ಎಚ್‌.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

***

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರದ್ಧಾಭಕ್ತಿಯಿಂದ ಶಿವರಾತ್ರಿಯನ್ನು ಆಚರಿಸಿ ಪರಮೇಶ್ವರನ ಕೃಪಾಶಿರ್ವಾದಕ್ಕೆ ಪಾತ್ರರಾಗೋಣ. ಭಗವಂತನು ತಮ್ಮೆಲ್ಲರಿಗೂ ಉತ್ತಮ ಆಯುರಾರೋಗ್ಯ, ಸುಖ-ಶಾಂತಿ, ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

- ಡಿ.ವಿ ಸದಾನಂದಗೌಡ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT