ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ‘ಸಂಕ್ರಾಂತಿ ಸಂಗೀತೋತ್ಸವ’

Last Updated 12 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗಾಯಕ ಆರ್‌.ಕೆ.ಶ್ರೀಕಂಠನ್ ಜನ್ಮದಿನದ ಅಂಗವಾಗಿ ವಿದ್ವಾನ್ ಆರ್‌.ಕೆ.ಶ್ರೀಕಂಠನ್ ಟ್ರಸ್ಟ್‌ ವತಿಯಿಂದ ‘ವಾರ್ಷಿಕ ಸಂಕ್ರಾಂತಿ ಸಂಗೀತ ಉತ್ಸವ’ ಕಾರ್ಯಕ್ರಮವನ್ನು ಮಲ್ಲೇಶ್ವರದ ಸೇವಾ ಸದನದಲ್ಲಿಜ.14ರಿಂದ 18ರವರೆಗೆ ಹಮ್ಮಿಕೊಳ್ಳಲಾಗಿದೆ.

14ರಂದು ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ₹50 ಸಾವಿರ ನಗದು, ಬೆಳ್ಳಿ ದೀಪ, ಸ್ಮರಣಿಕೆ ಒಳಗೊಂಡಿರುವ‘ಆರ್‌.ಕೆ.ಶ್ರೀಕಂಠನ್ರಾಷ್ಟ್ರೀಯ ಶ್ರೇಷ್ಠ ಪ್ರಶಸ್ತಿ’ಪ್ರದಾನ ನಡೆಯಲಿದೆ.

ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕ ಸಂಗೀತ ಗಾಯಕ ತ್ರಿಚೂರ್ ವಿ.ರಾಮಚಂದ್ರನ್ಅವರಿಗೆ ‘ಶ್ರೀಕಂಠ ಶಂಕರ’ ಹಾಗೂಅಕ್ಷರಾನಂದೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ‘ಶಂಕರಾದ್ವೈತ ತತ್ವಜ್ಞ’ ಬಿರುದು ಪ್ರದಾನವೂ ಇರಲಿದೆ. ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅತಿಥಿಯಾಗಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಭಾಗವಹಿಸಲಿದ್ದಾರೆ.

‘ವಾರಾಂತ್ಯ ಕರ್ಫ್ಯೂ ಇರುವುದರಿಂದ ಜ.15 ಮತ್ತ 16ರಂದು ಕಾರ್ಯಕ್ರಮಗಳು ನಡೆಯುವುದಿಲ್ಲ. ಜ.17ರಂದು ನಿತ್ಯಾ ಮತ್ತು ವಿದ್ಯಾ ತಂಡದಿಂದ ಗಾಯನ, 18ರಂದು ಜಿ.ಅರುಣ್ ಕುಮಾರ್, ವಾಮನ ನಂಬೂದಿರಿ, ಮೈಸೂರು ಎಂ.ನಾಗರಾಜ್ ಮತ್ತು ಮಂಜುನಾಥ್ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT