ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಂಗಲದಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಮತಾಂತರಕ್ಕೆ ಒತ್ತಡ; ಬಂಧನ

Last Updated 23 ನವೆಂಬರ್ 2022, 4:15 IST
ಅಕ್ಷರ ಗಾತ್ರ

ನಾಗಮಂಗಲ (ಮಂಡ್ಯ): ಪೋಷಕರು ಪ್ರವಾಸ ತೆರಳಿದ್ದ ವೇಳೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯೊಬ್ಬನನ್ನು ಪಟ್ಟಣ ಠಾಣೆ ಪೊಲೀಸರು ಈಚೆಗೆ ಬಂದಿಸಿದ್ದು ಪೋಕ್ಸೊ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.

ವಿವಾಹಿತನಾಗಿರುವ ಯೂನುಸ್‌ ಪಾಷಾ (25) ಬಂಧಿತ ವ್ಯಕ್ತಿ. ಬಾಲಕಿಗೆ ಮೊಬೈಲ್‌ ಕೊಡಿಸಿದ್ದ ಆರೋಪಿ ಆಕೆಯ ಸ್ನೇಹ ಸಂಪಾದಿಸಿಕೊಂಡಿದ್ದ. ಆಕೆಗೆ ವಿಡಿಯೊ ಕರೆ ಮಾಡಿ ಬಾಲಕಿಯ ಅಶೀಲ ದೃಶ್ಯಗಳನ್ನು ರೆಕಾರ್ಡ್‌ ಮಾಡಿಕೊಂಡಿದ್ದ.

ಪೋಷಕರು ಪ್ರವಾಸಕ್ಕೆ ತೆರಳಿದ್ದ ನಂತರ ಬಾಲಕಿ ಅಜ್ಜಿ ಮನೆಗೆ ತೆರಳಿದ್ದಳು. ಅಜ್ಜಿಗೆ ಬಾಲಕಿಯಿಂದಲೇ ನಿದ್ದೆ ಮಾತ್ರೆ ಕೊಡಿಸಿ, ಮನೆಗೆ ತೆರಳಿ ಅತ್ಯಾಚಾರ ಎಸಗಿದ್ದ. ಮದುವೆಯಾಗುವುದಾಗಿ ನಂಬಿಸಿದ್ದ ಆತ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹಾಕಿದ್ದ. ಇಲ್ಲದಿದ್ದರೆ ಅಶ್ಲೀಲ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದ,

ಪೋಷಕರು ಪ್ರವಾಸದಿಂದ ಬಂದ ನಂತರ ಬಾಲಕಿಯ ವರ್ತನೆ ಬದಲಾಗಿತ್ತು. ವಿಚಾರಿಸಿದಾಗ ಆಕೆ ಎಲ್ಲವನ್ನೂ ವಿವರಿಸಿದ್ದಳು. ನಂತರ ಪೋಷಕರು ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT