ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ 2ನೇ ಅಭ್ಯರ್ಥಿ ಮನ್ಸೂರ್ ಬಳಿ ₹ 57.71 ಕೋಟಿ ಆಸ್ತಿ

Last Updated 30 ಮೇ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮನ್ಸೂರ್‌ ಅಲಿ ಖಾನ್‌, ತಮ್ಮ ಕುಟುಂಬದ ಬಳಿ ₹ 57.71 ಕೋಟಿ ಮೌಲ್ಯದ ಆಸ್ತಿಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.

18 ಎಕರೆಗೂ ಹೆಚ್ಚು ಕೃಷಿ ಜಮೀನು, 14 ಕೃಷಿಯೇತರ ಜಮೀನು, ವಾಣಿಜ್ಯ ಕಟ್ಟಡಗಳು, ಮಿನಿ ಕೂಪರ್‌ ಮತ್ತು ಬಿಎಂಡಬ್ಲ್ಯು ಕಾರುಗಳು ತಮ್ಮ ಬಳಿ ಇವೆ ಎಂದು ನಾಮಪತ್ರದ ಜತೆಗಿನ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಮನ್ಸೂರ್‌ ಬಳಿ ₹ 48.34 ಕೋಟಿ ಮೌಲ್ಯದ ಆಸ್ತಿ ಇದ್ದರೆ, ಅವರ ಪತ್ನಿ ತಸ್ಬಿಯಾ ಖಾನ್‌ ಬಳಿ ₹ 9.37 ಕೋಟಿ ಆಸ್ತಿ ಇದೆ. ಇಬ್ಬರ ಬ್ಯಾಂಕ್‌ ಖಾತೆಗಳಲ್ಲೂ ತಲಾ ₹ 1.21 ಕೋಟಿ ಠೇವಣಿಗಳಿವೆ ಎಂಬ ಮಾಹಿತಿಯನ್ನು ಚುನಾವಣಾಧಿಕಾರಿಗೆ ನೀಡಿದ್ದಾರೆ.

ಜೈರಾಂ ಆಸ್ತಿ ₹ 4.56 ಕೋಟಿ: ನಾಲ್ಕನೇ ಬಾರಿ ರಾಜ್ಯಸಭಾ ಚುನಾವಣಾ ಕಣಕ್ಕಿಳಿದಿರುವ ಜೈರಾಂ ರಮೇಶ್‌ ಬಳಿ ₹ 4.56 ಕೋಟಿ ಮೌಲ್ಯದ ಆಸ್ತಿ ಇದೆ. ಬ್ಯಾಂಕ್‌ ಖಾತೆಗಳಲ್ಲಿ ₹ 90.59 ಕೋಟಿ ಇದ್ದರೆ, ಹೂಡಿಕೆ ರೂಪದಲ್ಲಿ ₹ 27.41 ಲಕ್ಷವಿದೆ. 2011ರ ಮಾಡೆಲ್‌ನ ರಿಟ್ಜ್‌ ಕಾರು ತಮ್ಮ ಬಳಿ ಇದೆ ಎಂದು ಅವರು ಘೋಷಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT