ಶುಕ್ರವಾರ, ಮೇ 14, 2021
27 °C

ಮಾರಸಂದ್ರ: ಗೆದ್ದ ಸದಸ್ಯರು ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಸಂದ್ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ನಾಲ್ವರು ಸದಸ್ಯರನ್ನು ಜಿಲ್ಲಾ ಸಿವಿಲ್ ನ್ಯಾಯಾಲಯ ಮುಂದಿನ ವಿಚಾರಣೆ ನಡೆಯುವ ತನಕ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಗ್ರಾಮದ ಎರಡು ವಾರ್ಡ್‍ಗಳಿಂದ ಗೆದ್ದ ಕೆ.ಆರ್.ತಿಮ್ಮಗೌಡ, ಪದ್ಮ ಕೃಷ್ಣಪ್ಪ, ಭಾಗ್ಯಮ್ಮ ಈಶ್ವರಾಚಾರ್ಯ, ಮುನಿಲಕ್ಷಮ್ಮ ಪರಶುರಾಮ್ ಅಮಾನತುಗೊಂಡ ಅಭ್ಯರ್ಥಿಗಳು.

‘ಮತದಾರರ ಪಟ್ಟಿಯಲ್ಲಿ ಮತದಾರರ ಭಾವಚಿತ್ರಗಳು ಇರಲಿಲ್ಲ. ಇದನ್ನು ಬೂತ್ ಏಜೆಂಟ್ ಗಮನಿಸಿ ಚುನಾವಣೆ ಅಧಿಕಾರಿಗಳ ಗಮನಕ್ಕೆ ತಂದರು. ಆದರೆ, ಅಧಿಕಾರಿಗಳು ಯಲಹಂಕ ತಹಶೀಲ್ದಾರ್ ನರಸಿಂಹಮೂರ್ತಿ ಅವರೇ ಈ ಪಟ್ಟಿಯನ್ನು ನೀಡಿದ್ದಾರೆ ಎಂದು ಹೇಳಿ ಭಾವಚಿತ್ರಗಳು ಇಲ್ಲದ ಸುಮಾರು 237 ಜನರಿಗೆ ಮತದಾನ ಮಾಡಲು ಅವಕಾಶ ನೀಡಿದರು. ಇದು ಅಕ್ರಮ ಮತದಾನ. ಹಾಗಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು‘ ಎಂದು ಮೊಕದ್ದಮೆ ಹೂಡಿರುವ ಸ್ವಾತಿ ತಿಳಿಸಿದರು.

’ಗ್ರಾಮ ಪಂಚಾಯಿತಿ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳ ಚಿಹ್ನೆ ಮತ್ತು ಶಾಸಕರ ಭಾವಚಿತ್ರ ಉಪಯೋಗಿಸಕೂಡದು. ಆದರೆ, ನಾಲ್ವರು ಅಭ್ಯರ್ಥಿಗಳು ಬಿಜೆಪಿಯ ಚಿಹ್ನೆ ಬಳಸಿದ್ದಾರೆ. ಅಲ್ಲದೇ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಭಾವಚಿತ್ರವನ್ನು ತಮ್ಮ ಕರಪತ್ರ
ಗಳಲ್ಲಿ ಮುದ್ರಿಸಿದ್ದಾರೆ. ಇದು ಚುನಾವಣೆ ನೀತಿಸಂಹಿತೆಯ ಉಲ್ಲಂಘನೆ. ಹಾಗಾಗಿ ಇವರ ವಿರುದ್ದ ಮೊಕದ್ದಮೆ ಹೂಡಿದೆ‘ ಎಂದು ಅವರು ಹೇಳಿದರು.

’ಗ್ರಾಮದಲ್ಲಿರುವ ಅಪಾರ್ಟ್‌
ಮೆಂಟ್‌ ಸಮುಚ್ಚಯ ಒಂದರಲ್ಲಿ 730 ಮತದಾರರಿದ್ದಾರೆ. ಅವರಲ್ಲಿ ಕೆಲವರು ಕೊರೊನಾ ಸಮಯದಲ್ಲಿ ತಮ್ಮ ಸ್ವಂತ ಗ್ರಾಮಗಳಿಗೆ ತೆರಳಿದ್ದಾರೆ. ಶೇಕಡ 30ರಷ್ಟು ಮತದಾರರು ಇಲ್ಲ. ಈ ಬಗ್ಗೆ ತನಿಖೆ ನಡೆಸಿ ನೈಜ ಸಂಗತಿಯನ್ನು ಹೊರ ಹಾಕಬೇಕಾಗಿದೆ‘ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು