ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನದಿಗೆ ರಾಜಕಾಲುವೆ ಸಂಪರ್ಕಕ್ಕೆ ‘ಮಾಸ್ಟರ್‌ ಪ್ಲಾನ್‌’

ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಪ್ರಕಟ
Last Updated 20 ಸೆಪ್ಟೆಂಬರ್ 2022, 4:47 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಾಜಕಾಲುವೆಗಳಲ್ಲಿ ಮಳೆ ನೀರು ಮಾತ್ರ ಹರಿಯುವಂತೆ ಮಾಡಿ ಅವುಗಳನ್ನು ಪಿನಾಕಿನಿ ನದಿಗೂ ಆ ಮೂಲಕ ಕಾವೇರಿ ನದಿಗೆ ಸಂಪರ್ಕ ಕಲ್ಪಿಸಲು ‘ಮಾಸ್ಟರ್‌ ಪ್ಲಾನ್‌’ ರೂಪಿಸಲಾಗುವುದು. ಅಲ್ಲದೇ, ಮಳೆ, ಪ್ರವಾಹ ಮತ್ತು ರಾಜಕಾಲುವೆಗಳ ನಿರಂತರ ನಿರ್ವಹಣೆಗಾಗಿ ಕಾರ್ಯಪಡೆ ರಚಿಸಲಾಗುವುದಐಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆ ಮತ್ತು ಪ್ರವಾಹದ ಬಗ್ಗೆ ವಿಧಾನಸಭೆಯಲ್ಲಿ ಸೋಮವಾರ ಸುದೀರ್ಘ ಉತ್ತರ ನೀಡಿದ ಅವರು, ನಗರದ ಜನಸಂಖ್ಯೆ, ಹೊಸ ಪ್ರದೇಶಗಳಿಂದಾಗಿ ರಾಜಕಾಲುವೆಗಳ ಮೇಲೆ ಅಧಿಕ ಒತ್ತಡ ಉಂಟಾಗಿದೆ ಎಂದರು.

ರಾಜಕಾಲುವೆಗಳ ಮೇಲೆ ಒತ್ತಡ ಕಡಿಮೆ ಮಾಡಿ, ಒತ್ತುವರಿಗಳನ್ನು ತೆರವು ಮಾಡಲು ಹೊಸ ವ್ಯವಸ್ಥೆಯ ಅಗತ್ಯವಿದೆ.ಇದಕ್ಕಾಗಿ ಅಧ್ಯಯನ ನಡೆಸಿ ಬಿಬಿಎಂಪಿ, ಬಿಡಿಎ ಮತ್ತು ಬಿಎಂಆರ್‌ಡಿಯನ್ನು ಸೇರಿಸಿ ಮಾಸ್ಟರ್‌ ಪ್ಲಾನ್‌ ರೂಪಿಸಲಾಗುವುದು. ಈವರೆಗೂ ಇದಕ್ಕೆ ಆದ್ಯತೆ ನೀಡಿರಲಿಲ್ಲ. ಇನ್ನು ಮುಂದೆ ಇದು ನಗರದ ಆದ್ಯತೆಯ ವಿಷಯವಾಗಲಿದೆ. 400 ಕಿ.ಮೀನಷ್ಟು ರಾಜಕಾಲುವೆ ಈ ವ್ಯಾಪ್ತಿಗೆ ಒಳಪಡಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 2,626 ಒತ್ತುವರಿಗಳನ್ನು ಗುರುತಿಸಲಾಗಿದೆ. 2016ರವರೆಗೆ 428 ಒತ್ತುವರಿ ತೆರವು ಮಾಡಲಾಗಿದೆ. 2018 ರ ಬಳಿಕ 1,502 ಒತ್ತುವರಿ ತೆರವು ಮಾಡಿದ್ದೇವೆ. ಇನ್ನೂ 602 ಒತ್ತುವರಿ ತೆರವು ಬಾಕಿ ಉಳಿದಿದೆ. 2020 ರಲ್ಲಿ ಕೋವಿಡ್‌ ಕಾರಣ ತೆರವು ಕಾರ್ಯಕ್ಕೆ ತಡೆ ನೀಡಬೇಕು ಎಂದು ಕೆಲವರು ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದರು. ಹೈಕೋರ್ಟ್‌ ತಡೆ ನೀಡಿತ್ತು. ಈಗ ತಡೆಯನ್ನು ತೆರವುಗೊಳಿಸಲಾಗಿದೆ ಎಂದು ಅವರು ಹೇಳಿದರು.

ನಗರದ ಪ್ರವಾಹ ನಿರ್ವಹಣೆಗೆ ಕಳೆದ ವರ್ಷ ₹1,600 ಕೋಟಿ ನೀಡಿದ್ದೇವೆ. ಇತ್ತೀಚೆಗೆ ರಾಜಕಾಲುವೆ ನಿರ್ವಹಣೆಗೆ ₹300 ಕೋಟಿ ನೀಡಲಾಗಿದೆ. ರಸ್ತೆ ಅಭಿವೃದ್ಧಿಗೂ ₹300 ಕೋಟಿ ನೀಡಲಾಗಿದೆ. ಇನ್ನು ಮುಂದೆ ಮಳೆ, ಪ್ರವಾಹ ಮತ್ತು ರಾಜಕಾಲುವೆಗಳ ನಿರ್ವಹಣೆಗೆ ಕಾರ್ಯಪಡೆ ರಚಿಸಲಾಗುವುದು. ಈ ಕಾರ್ಯಕ್ಕೆ ಪ್ರತಿ ವರ್ಷ ಬಜೆಟ್‌ನಲ್ಲಿ ಹಣ ನಿಗದಿ ಮಾಡಲಾಗುವುದು. ಇದು ನಿರಂತರ ಪ್ರಕ್ರಿಯೆ ಆಗಲಿದೆ ಎಂದು ಬೊಮ್ಮಾಯಿ ವಿವರಿಸಿದರು.

ನಗರದ ಎಲ್ಲಾ ಕೆರೆಗಳಿಗೆಸ್ಲೂಯಿಸ್‌ ಗೇಟ್‌ ಅಳವಡಿಸಲು ಮತ್ತು ತ್ಯಾಜ್ಯ ನೀರಿನ ಸಂಸ್ಕರಣಾ ಘಟಕವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗು ವುದು ಎಂದು ಮುಖ್ಯಮಂತ್ರಿ ಅವರು ಹೇಳಿದರು.

‘ಐಟಿಯಿಂದ ಖ್ಯಾತಿ, ಜನರ ಶ್ರಮವೂ ಇದೆ’
‘ಐಟಿ–ಬಿಟಿಯಿಂದಬೆಂಗಳೂರು ನಗರಕ್ಕೆ ದೊಡ್ಡ ಹೆಸರು ಬಂದಿದೆ. ಭಾರತ ಎಂದರೆ ಬೆಂಗಳೂರು ಎಂಬ ಮಟ್ಟಕ್ಕೆ ನಗರ ಬೆಳೆದಿದೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

‘ಬಹುತೇಕ ಐಟಿ ಕಂಪನಿಗಳು ಸ್ವಂತ ಕಟ್ಟಡ ಹೊಂದಿಲ್ಲ. ಐಟಿ ಪಾರ್ಕ್‌ಗಳಲ್ಲಿ ಕಂಪನಿಗಳು ನಡೆಯುತ್ತಿವೆ. ಈ ಪಾರ್ಕ್‌ಗಳಲ್ಲಿ ರಾಜಕಾಲುವೆಗಳು ಒತ್ತುವರಿ ಆಗಿವೆ. ಹಲವು ಕಡೆ ಮುಚ್ಚಿಹೋಗಿವೆ. ಈ ಕಂಪನಿಗಳ ಜತೆ ಐಟಿ–ಬಿಟಿ ಸಚಿವರು ಮಾತುಕತೆ ನಡೆಸಿದ್ದಾರೆ. ಅವರಿಗೆ ತೊಂದರೆ ಆಗದಂತೆ ತೆರವು ಮಾಡಲಾಗುವುದು’ ಎಂದು ತಿಳಿಸಿದರು.

ಸೆಂಚುರಿ ವಿರುದ್ಧ ಕ್ರಮ: ರಾಜಕಾಲುವೆ ಒತ್ತುವರಿ ಮಾಡಿರುವ ಸೆಂಚುರಿ ರಿಯಾಲಿಟಿ ಕಂಪನಿ ವಿರುದ್ಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಬೊಮ್ಮಾಯಿ ಹೇಳಿದರು.

**

ಬ್ರ್ಯಾಂಡ್‌ ಬೆಂಗಳೂರಿಗೆ ಆಟೊ, ಬಸ್‌, ಟ್ಯಾಕ್ಸಿ ಚಾಲಕರು, ಪೌರಕಾರ್ಮಿಕರು ಮತ್ತು ಜನಸಾಮಾನ್ಯರ ಕೊಡುಗೆಯೂ ಇದೆ. ಈ ಬ್ರಾಂಡ್‌ ನಿರ್ಮಾಣ ಯಾವುದೇ ಒಬ್ಬ ವ್ಯಕ್ತಿಯಿಂದ ಆಗಿದ್ದಲ್ಲ.
–ಆರ್‌.ಅಶೋಕ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT