ಶುಕ್ರವಾರ, ಅಕ್ಟೋಬರ್ 30, 2020
20 °C

ವೈದ್ಯರ ನಗರ ಸೇವೆ ಕಡ್ಡಾಯ ಪ್ರಶ್ನಿಸಿ ಮೇಲ್ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋರ್ಸ್ ಮುಗಿದ ಬಳಿಕ ನಗರ ಪ್ರದೇಶಗಳಲ್ಲಿ ಒಂದು ವರ್ಷದ ಕಡ್ಡಾಯ ತರಬೇತಿ ಪಡೆಯಬೇಕು ಎಂಬ ಅಧಿಸೂಚನೆ ಪ್ರಶ್ನಿಸಿ ವೈದ್ಯಕೀಯ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

281 ವಿದ್ಯಾರ್ಥಿಗಳು ಸಲ್ಲಿಸಿರುವ ಮೇಲ್ಮನವಿಯಲ್ಲಿ, ‘ಖಾಸಗಿ, ಆಡಳಿತ ಮಂಡಳಿ ಮತ್ತು ಎನ್‌ಆರ್‌ಐ ಕೋಟಾಗಳ ಅಡಿಯಲ್ಲಿ ಸೀಟು ಪಡೆದು ಪ್ರತಿವರ್ಷ ₹6 ಲಕ್ಷದಿಂದ ₹75 ಲಕ್ಷಗಳ ವರೆಗೆ ಬೋಧನಾ ಶುಲ್ಕವನ್ನು ವಿದ್ಯಾರ್ಥಿಗಳು ಪಾವತಿಸುತ್ತಿದ್ದಾರೆ. ಹೀಗಾಗಿ ನಗರ ಸೇವೆ ಕಡ್ಡಾಯ ಸೂಕ್ತವಲ್ಲ’ ಎಂದಿದ್ದಾರೆ.

ಜುಲೈ 23ರಂದು ಈ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನು ಏಕ ಸದಸ್ಯ ಪೀಠ ಆಗಸ್ಟ್ 30ರಂದು ಎತ್ತಿ ಹಿಡಿದಿದೆ. ಕರ್ನಾಟಕ ವೈದ್ಯಕೀಯ ಕಡ್ಡಾಯ ಸೇವಾ ತರಬೇತಿ ಕಾಯ್ದೆಯ ಸೆಕ್ಷನ್ 3ರ ಪ್ರಕಾರ, ಎಂಬಿಬಿಎಸ್ ಮುಗಿಸಿದವರು ಒಂದು ವರ್ಷ ಗ್ರಾಮೀಣ ಸೇವೆ ಕಡ್ಡಾಯ. ಸೆಕ್ಷನ್ 4ರ ಪ್ರಕಾರ ಸ್ನಾತಕೋತ್ತರ ಪದವಿ ಪಡೆದವರು ನಗರ ಪ್ರದೇಶದಲ್ಲಿ ಒಂದು ವರ್ಷ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಇದನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಲು ನಿರ್ದೇಶನ ನೀಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು