ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು–ಬೆಂಗಳೂರು: 8ರಿಂದ ಮೆಮು ರೈಲು

Last Updated 5 ಏಪ್ರಿಲ್ 2022, 19:52 IST
ಅಕ್ಷರ ಗಾತ್ರ

ತುಮಕೂರು: ಬೆಂಗಳೂರು–ತುಮಕೂರು ನಡುವೆ ವಿದ್ಯುದೀಕರಣ ಕೆಲಸ ಪೂರ್ಣಗೊಂಡಿದ್ದು, ಈ ಎರಡು ನಗರಗಳ ನಡುವೆ ಡೆಮು ರೈಲಿಗೆ ಬದಲಾಗಿ ಮೆಮು ರೈಲು ಸಂಚಾರ ಏ. 8ರಿಂದ ಆರಂಭವಾಗಲಿದೆ.

ಈವರೆಗೆ ತುಮಕೂರು– ಯಶವಂತಪುರ ಮಧ್ಯೆ 8 ಬೋಗಿಗಳ ಡೆಮು ರೈಲು ಸಂಚರಿಸುತ್ತಿದ್ದು, ಈಗ ಮೆಮು ರೈಲು ಸಂಚರಿಸಲಿದೆ. ನಗರದಿಂದ ಬೆಳಿಗ್ಗೆ 8 ಗಂಟೆಗೆ ಹೊರಡುತ್ತಿದ್ದ ಡೆಮು ರೈಲಿಗೆ ಬದಲಾಗಿ 16 ಬೋಗಿಗಳ ಮೆಮು ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತುಮಕೂರು ಕಡೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಿಲ್ದಾಣದಿಂದಬೆಳಿಗ್ಗೆ 9.30ಕ್ಕೆ ಹೊಸ ರೈಲು ಸಂಚಾರ ಆರಂಭಗೊಳ್ಳಲಿದ್ದು, 11 ಗಂಟೆಗೆ ತುಮಕೂರು ತಲುಪಲಿದೆ. ಇದೇ ರೈಲು ತುಮಕೂರಿನಿಂದಬೆಳಗ್ಗೆ 11.15ಕ್ಕೆ ಹೊರಟು ಬೆಂಗಳೂರಿನ ಕೆಎಸ್‍ಆರ್ ನಿಲ್ದಾಣವನ್ನು1.25ಕ್ಕೆ ತಲುಪಲಿದೆ. ಕೆಎಸ್‍ಆರ್ ನಿಲ್ದಾಣದಿಂದಮಧ್ಯಾಹ್ನ 1.50ಕ್ಕೆ ಹೊರಟು ತುಮಕೂರು ನಗರವನ್ನುಮಧ್ಯಾಹ್ನ 3.20ಕ್ಕೆ ತಲುಪಲಿದೆ. ತುಮಕೂರಿನಿಂದ ಮಧ್ಯಾಹ್ನ 3.50ಕ್ಕೆ ಹೊರಟು, ಕೆಎಸ್‍ಆರ್ ರೈಲು ನಿಲ್ದಾಣಕ್ಕೆ 5.25ಕ್ಕೆ ಸೇರಲಿದೆ.

ಅರಸೀಕೆರೆಗೂ ರೈಲು: ಬೆಂಗಳೂರು–ಅರಸೀಕೆರೆ ಮಧ್ಯೆ ಸಂಚರಿಸುತ್ತಿದ್ದ ಎಂಟು ಬೋಗಿಗಳ ಡೆಮು ರೈಲಿಗೆ ಬದಲಾಗಿ 17 ಐಸಿಎಫ್ ಕೋಚ್‍ಗಳ ಸಾಂಪ್ರದಾಯಿಕ ರೈಲುಗಳ ಸಂಚಾರ ಕೂಡಾ ಏ. 8ರಿಂದ ಪ್ರಾರಂಭವಾಗಲಿದೆ. ಈವರೆಗೂ ಅರಸೀಕೆರೆಯಿಂದ ಕೆಎಸ್‍ಆರ್‌ ವರೆಗೆ ಮಾತ್ರ ಸಂಚರಿಸುತ್ತಿದ್ದ ಈರೈಲನ್ನು ಚನ್ನಪಟ್ಟಣದವರೆಗೆ ವಿಸ್ತರಿಸಲಾಗಿದೆ. ಇದರಿಂದ ಉದ್ಯೋಗಕ್ಕಾಗಿ ಕೆಂಗೇರಿ ಕಡೆಗೆ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದೇ ರೈಲು ಸಂಜೆ 4.50ಕ್ಕೆ ಚೆನ್ನಪಟ್ಟಣದಿಂದ ವಾಪಸ್ಸಾಗಲಿದ್ದು, ಅರಸೀಕೆರೆ ತಲುಪಲಿದೆ.

ಅರಸೀಕೆರೆ– ತುಮಕೂರು– ಬೆಂಗಳೂರು ನಡುವೆ ಡೆಮು ರೈಲು ಸಂಚರಿಸುತ್ತಿದ್ದು, ಅಧಿಕ ಜನ ದಟ್ಟಣೆಯಿಂದಾಗಿ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿತ್ತು. ಈಗ ಹೆಚ್ಚಿನ ಬೋಗಿಗಳ ರೈಲು ಆರಂಭದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ತುಮಕೂರು– ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT