ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.15 ರವರೆಗೆ ರಸ್ತೆ ತೆರಿಗೆ ಪಾವತಿ ಗಡುವು ಮುಂದೂಡಿಕೆ: ಸಚಿವ ಶ್ರೀರಾಮುಲು

Last Updated 19 ಆಗಸ್ಟ್ 2021, 8:46 IST
ಅಕ್ಷರ ಗಾತ್ರ

ಬೆಂಗಳೂರು: ಸೆಪ್ಟೆಂಬರ್ 15ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆಯನ್ನು ಅಕ್ಟೊಬರ್ 15 ರವರೆಗೆ ದಂಡರಹಿತವಾಗಿ ಪಾವತಿಸಲುಗಡುವು ವಿಸ್ತರಿಸಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ‘ಖಾಸಗಿ ಬಸ್ ಮಾಲೀಕರ ವಿವಿಧ ಸಂಘಟನೆಗಳ ಸದಸ್ಯರು ನನ್ನನ್ನು ಭೇಟಿ ಮಾಡಿ ಕೋವಿಡ್ ಹಿನ್ನಲೆಯಲ್ಲಿ ಉದ್ದಿಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ರಸ್ತೆ ತೆರಿಗೆ ಪಾವತಿ ದಿನಾಂಕವನ್ನು ಮುಂದೂಡಲು ಮನವಿ ಮಾಡಿದ್ದರು’ ಎಂದಿದ್ದಾರೆ.

‘ಈ ಹಿನ್ನೆಲೆಯಲ್ಲಿ ಇದೊಂದು ವಿಶೇಷ ಪ್ರಕರಣ ವೆಂದು ಪರಿಗಣಿಸಿ ಸಾರಿಗೆ ಉದ್ದಿಮೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ಸ್ಟೇಜ್ ಕ್ಯಾರೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳಿಗೆ ತೆರಿಗೆ ಪಾವತಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ’ ಎಂದು ಹೇಳಿದ್ದಾರೆ.

‘ಆಗಸ್ಟ್ 15ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆಯನ್ನು ಸೆಪ್ಟೆಂಬರ್ 15ರವರೆಗೆ ಹಾಗೂ ಸೆಪ್ಟೆಂಬರ್ 15ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆಯನ್ನು ಅಕ್ಟೊಬರ್ 15ರವರೆಗೆ ದಂಡರಹಿತವಾಗಿ ಪಾವತಿಸಲು ವಿಸ್ತರಿಸಲಾಗಿದೆ. ಇದರಿಂದ ಸುಮಾರು 40 ಸಾವಿರ ಬಸ್ ಮಾಲೀಕರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT