ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಅವಕಾಶ ತಿರಸ್ಕರಿಸಿದ್ದ ಮಿರ್ಜಾ ಇಸ್ಮಾಯಿಲ್: ಅಬ್ದುಲ್‌ ಬಷೀರ್‌

Last Updated 25 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ ಮಿರ್ಜಾ ಇಸ್ಮಾಯಿಲ್‌ ಅವರಿಗೆ ಕಾಶ್ಮೀರದ ಮುಖ್ಯಮಂತ್ರಿಯಾಗುವ ಅವಕಾಶ ಒದಗಿಬಂದಿತ್ತು. ಈ ಅವಕಾಶವನ್ನು ಅವರು ಗೌರವಪೂರ್ವಕವಾಗಿ ತಿರಸ್ಕರಿಸಿದ್ದರು’ ಎಂದು ಸಾಹಿತಿ ಅಬ್ದುಲ್‌ ಬಷೀರ್‌ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಸರ್ ಮಿರ್ಜಾ ಇಸ್ಮಾಯಿಲ್ ಅವರ 137ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು. ‘ಕೈಗಾರಿಕೆಗಳ ವಿಕೇಂದ್ರಿಕರಣಕ್ಕೆ
ಮಿರ್ಜಾ ಇಸ್ಮಾಯಿಲ್ ಒಲವು ಹೊಂದಿದ್ದರು’ ಎಂದು ಹೇಳಿದರು.

ಕಸಾಪ ಅಧ್ಯಕ್ಷ ಮಹೇಶ ಜೋಶಿ, ‘ಮೈಸೂರು ನಗರ ಅತ್ಯಂತ ಸುಂದರ ನಗರವಾಗಿ ಹೊರಹೊಮ್ಮಲು ಮಿರ್ಜಾ ಇಸ್ಮಾಯಿಲ್‌ ಅವರೇ ಮುಖ್ಯ ಕಾರಣ. ಅವರು ಪರ್ಷಿಯಾ ಮೂಲದವರಾದರೂ ಕನ್ನಡದ ಮೇಲೆ ಅಪಾರ ಗೌರವ ಹೊಂದಿದ್ದರು. ಕಸಾಪ ಕಟ್ಟಡ ನಿರ್ಮಾಣಕ್ಕೆ ಉಚಿತವಾಗಿ ಜಾಗ ನೀಡಿ, ‘ಕನ್ನಡ ತಾಯಿಯ ದೇಗುಲ ಇಲ್ಲಿ ಸಿದ್ಧವಾಗಲಿ’ ಎಂಬ ಮಾತನ್ನು ಹೇಳಿದ್ದರು’ ಎಂದು ಸ್ಮರಿಸಿಕೊಂಡರು.

ಜೆ.ಎಸ್.ಎಸ್. ಮಹಾವಿದ್ಯಾಲಯದನಿವೃತ್ತ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ಉಷಾಲ, ‘ಮಿರ್ಜಾ ಇಸ್ಮಾಯಿಲ್ ಅವರ ದೂರದೃಷ್ಟಿಯ ಪ್ರತೀಕ ಮೈಸೂರುಸಂಸ್ಥಾನ. ನೀರಾವರಿ, ಕೃಷಿ, ಕೈಗಾರಿಕೆಯ ಯೋಜನೆಗಳನ್ನು ಮೈಸೂರಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾಡನ್ನು ಮಾದರಿ ಮಾಡಿದ್ದರು. ಸೌಂದರ್ಯದ ಕುರಿತು ಅತಿಯಾದ ಆಸಕ್ತಿ ಹೊಂದಿದ್ದ ಅವರ ದೂರದೃಷ್ಟಿಯ ಪರಿಣಾಮವೇ ಬೃಂದಾವನ ಗಾರ್ಡನ್‌’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT