ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ದರ್ಜೆಗೇರಿಸಿದ 150 ಸರ್ಕಾರಿ ಐಟಿಐಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

Last Updated 20 ಜೂನ್ 2022, 19:49 IST
ಅಕ್ಷರ ಗಾತ್ರ

ಬೆಂಗಳೂರು: ಟಾಟಾ ಸಮೂಹದ ನೆರವಿನೊಂದಿಗೆ ಕರ್ನಾಟಕ ಸರ್ಕಾರವು ₹4,736 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿರುವ 150 ಸರ್ಕಾರಿ ಐಟಿಐಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.

ರಾಜ್ಯದ 150 ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಗಳನ್ನು ರಾಷ್ಟ್ರ ಮಟ್ಟದ ತಾಂತ್ರಿಕ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಟಾಟಾ ಟೆಕ್ನಾಲಜೀಸ್‌ ಲಿಮಿಟೆಡ್‌ (ಟಿಟಿಎಲ್‌) ಮತ್ತು ಇತರ 20 ಕೈಗಾರಿಕಾ ಸಂಸ್ಥೆಗಳ ಸಹಯೋಗ ಇದಕ್ಕಿದೆ. ‘ಉದ್ಯೋಗ’ ಹೆಸರಿನ ಈ ವಿನೂತನ ಯೋಜನೆಯಡಿ ಜಾಗತಿಕ ಕೈಗಾರಿಕೆ, ಅಸೆಂಬ್ಲಿ ಲೈನುಗಳು ಮತ್ತು ಉದ್ಯೋಗಾವಕಾಶಗಳಿಗಾಗಿ ಅತ್ಯಾಧುನಿಕ ತಂತ್ರಜ್ಞಾನ ತರಬೇತಿ ನೀಡ
ಲಾಗುವುದು. ಇದರಿಂದ ರಾಜ್ಯದ 1.70 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ.

ಹರ್ಷಗೊಂಡ ಮೋದಿ: ಉನ್ನತೀಕರಿಸಿದ ಐಟಿಐಗಳ ಚಾಲನೆ ಗುಂಡಿಯನ್ನು ಒತ್ತುತ್ತಿದ್ದಂತೆಯೇ, ರಾಜ್ಯಾದ್ಯಂತ ಇರುವ ಐಟಿಐಗಳೆಲ್ಲ ಕ್ರಿಯಾಶೀಲವಾದುದನ್ನು ಕಂಡು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದರು.

ಉದ್ಘಾಟನೆ ಮುಗಿಯುತ್ತಿದ್ದಂತೆ ನೇರವಾಗಿವಿದ್ಯಾರ್ಥಿಗಳ ಬಳಿ ತೆರಳಿದ ಮೋದಿ, ಕೆಲ ನಿಮಿಷಗಳನ್ನು ಅವರ ಜತೆ ಕಳೆದು ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಚಾರಿಸಿದರು. ಈ ಕ್ಷಣವನ್ನು ಕ್ಯಾಮರಾಗಳು ಸೆರೆ ಹಿಡಿದವು. ಅದರಿಂದ ಸಮಾಧಾನಗೊಳ್ಳದ ಪ್ರಧಾನಿ, ‘ಅಲ್ಲಿರುವ ಮೆಟ್ಟಿಲ ಬಳಿಗೆ ನೀವೆಲ್ಲ ಬನ್ನಿ. ಅಲ್ಲಿ ಫೊಟೋ ಸೆಷನ್‌ ಆಗಲಿ’ ಎಂದು ಹೇಳಿದರು.

ಬಳಿಕ ಅವರು ಉನ್ನತೀಕರಿಸಿರುವ ಐಟಿಐ ಮಾದರಿಯನ್ನು ವೀಕ್ಷಿಸಲು ತೆರಳಿದರು. ಸಿಬ್ಬಂದಿಯಿಂದ ಐಟಿಐ ಸಾಧನ–ಸಲಕರಣೆಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಆ ಬಳಿಕಕ್ಯಾಂಪಸ್ಸಿನ ಮೆಟ್ಟಿಲುಗಳ ಬಳಿ ತೆರಳಿ ವಿದ್ಯಾರ್ಥಿಗಳ ಜತೆ ಫೋಟೊ ತೆಗೆಸಿಕೊಂಡರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಲಾದಜೋಶಿ, ಸಚಿವರಾದ ವಿ.ಸೋಮಣ್ಣ, ಶ್ರೀನಿವಾಸಪೂಜಾರಿ, ಸುನಿಲ್‌ಕುಮಾರ್‌, ಬಿ.ಶ್ರೀರಾಮುಲು, ಕುಲಪತಿ ಡಾ.ಭಾನುಮೂರ್ತಿ ಮತ್ತು ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT