ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1 ಲಕ್ಷ ಬಹುಮಹಡಿ ವಸತಿ ಯೋಜನೆಗೆ ಇನ್ನೂ 500 ಎಕರೆ ಅವಶ್ಯ: ಸಚಿವ ಸೋಮಣ್ಣ

ಭೂಮಿ ನೀಡುವಂತೆ ಸಿ.ಎಂಗೆೆ ಪತ್ರ ಬರೆದ ಸಚಿವ
Last Updated 25 ಮಾರ್ಚ್ 2021, 19:50 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 1 ಲಕ್ಷ ಬಹುಮಹಡಿ ವಸತಿ ನಿರ್ಮಾಣ ಮಾಡುವ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಅವಶ್ಯವಿರುವ 500 ಎಕರೆ ವಸತಿ ಯೋಗ್ಯ ಭೂಮಿ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಸತಿ ಸಚಿವ ವಿ. ಸೋಮಣ್ಣ ಪತ್ರ ಬರೆದಿದ್ದಾರೆ.

‘ಸರ್ಕಾರ ಈಗಾಗಲೇ 1,014 ಎಕರೆ ಭೂಮಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಿದೆ. ಆದರೆ, ಈ ಭೂಮಿಯಲ್ಲಿ 311 ಎಕರೆ ಪ್ರದೇಶ ಮಾತ್ರ ವಸತಿ ಯೋಜನೆಗೆ ಬಳಸಲು ಯೋಗ್ಯವಾಗಿದೆ. ಈವರೆಗೆ 46,499 ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇನ್ನೂ 500 ಎಕರೆ ಭೂಮಿ ಅವಶ್ಯವಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಹರಾಜು ಹಾಕಲು ಉದ್ದೇಶಿಸಿರುವ 103.12 ಎಕರೆ ಸರ್ಕಾರಿ ಕಂದಾಯ ಭೂಮಿ ಸೇರಿದಂತೆ ಒಟ್ಟು 500 ಎಕರೆ ಭೂಮಿಯನ್ನು ಈ ಉದ್ದೇಶಕ್ಕಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮಂಜೂರು ಮಾಡಬೇಕು’ ಎಂದೂ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಬಿಬಿಎಂಪಿ ಆಯುಕ್ತರಿಗೂ ಪತ್ರ ಬರೆದಿರುವ ಅವರು, ‘ಈ ಯೋಜನೆಗಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮಂಜೂರು ಮಾಡಿರುವ ಭೂಮಿಯ ಪೈಕಿ, ಬಿಬಿಎಂಪಿ ವ್ಯಾಪ್ತಿಯಲ್ಲಿ 30 ಎಕರೆ ಜಾಗ ಕ್ವಾರಿಗಳು, ಹಳ್ಳಕೊಳ್ಳಗಳಿಂದ ಕೂಡಿದ್ದು ಅನುಪಯುಕ್ತವಾಗಿದೆ. ಈ ಭೂಮಿಯನ್ನು ಪಾಲಿಕೆ ವತಿಯಿಂದಲೇ ಸಮತಟ್ಟು ಮಾಡಿಕೊಡಲು ಹಾಗೂ ಅಲ್ಲಿ ವಸತಿ ನಿರ್ಮಾಣ ಮಾಡಲು ಪಾಲಿಕೆ ವತಿಯಿಂದ ಅನುದಾನ ಒದಗಿಸಬೇಕು’ ಎಂದೂ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT