ಗುರುವಾರ , ಡಿಸೆಂಬರ್ 3, 2020
20 °C

ಭಾರಿ ಮುನ್ನಡೆ ಸಾಧಿಸಿದ ಮುನಿರತ್ನ: ಬೆಂಬಲಿಗರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರಿ ಕುತೂಹಲ ಮೂಡಿಸಿರುವ ಉಪ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಆರ್‌.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರಿ ಮುನ್ನಡೆಯಲ್ಲಿದ್ದಾರೆ.

ಒಟ್ಟು 25 ಸುತ್ತುಗಳ ಪೈಕಿ ಈಗಾಗಲೇ ಒಂಬತ್ತು ಸುತ್ತುಗಳ ಮತ ಎಣಿಕೆ ಮುಕ್ತಾಯಗೊಂಡಿದ್ದು, ಮುನಿರತ್ನ ಅವರು 25 ಸಾವಿರಕ್ಕೂ ಮತಗಳ ಅಂತರದಿದ ಮುಂದಿದ್ದಾರೆ. ಆ ಮೂಲಕ, ಗೆಲುವಿನ ಕಡೆಗೆ ಸ್ಪಷ್ಟ ಹೆಜ್ಜೆ ಇಟ್ಟಿದ್ದಾರೆ. ಕಾಂಗ್ರೆಸ್‌ನ ಕುಸುಮಾ ಎರಡನೇ ಸ್ಥಾನದಲ್ಲಿದ್ದು, ಜೆಡಿಎಸ್‌ನ ಕೃಷ್ಣ ಮೂರ್ತಿ ಮೂರನೇ ಸ್ಥಾನದಲ್ಲಿದ್ದಾರೆ.

ಒಂಬತ್ತನೇ ಸುತ್ತಿನ ಅಂತ್ಯಕ್ಕೆ ಮುನಿರತ್ನ 50,387 ಮತಗಳನ್ನು ಪಡೆದರೆ, ಅವರ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಕುಸುಮಾ 25,161 ಮತಗಳನ್ನು ಪಡೆದಿದ್ದಾರೆ. ಜಿಡಿಎಸ್‌ನ ಕೃಷ್ಣಮೂರ್ತಿ ಅವರಿಗೆ 1862 ಮತಗಳು ಮಾತ್ರ ಬಂದಿವೆ. ಮುನಿರತ್ನ ಅವರ ಅಂತರ 25,226 ಮತಗಳು. ಈವರೆಗೆ ಎಣಿಕೆ ನಡೆದ ಎಲ್ಲ ಸುತ್ತುಗಳಲ್ಲೂ ಮುನಿರತ್ನ ಮುನ್ನಡೆ ಕಾಯ್ದುಕೊಂಡೇ ಬಂದಿದ್ದಾರೆ.

ಅದಾಗಲೇ ಮುನಿರತ್ನ ಬೆಂಬಲಿಗರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಮತ ಎಣಿಕೆ ಕೇಂದ್ರದ ಎದುರು ಬಿಜೆಪಿಯ ನೂರಾರು ಕಾರ್ಯಕರ್ತರು ಜಮಾಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮುನಿರತ್ನ ಪರ ಘೋಷಣೆ ಕೂಗುತ್ತಿದ್ದಾರೆ.  ಗುಂಪುಗೂಡಿದವರನ್ನು ಪೊಲೀಸರು ಚದುರಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು