ಭಾನುವಾರ, ಮೇ 22, 2022
29 °C

ಕರೆ ಸ್ವೀಕರಿಸದಿದ್ದಕ್ಕೆ ಮಹಿಳೆ ಕೊಂದು ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೊಬೈಲ್ ಕರೆ ಸ್ವೀಕರಿಸಲಿಲ್ಲವೆಂಬ ಕಾರಣಕ್ಕೆ ಸ್ನೇಹಿತೆ ರಮ್ಯಾ (35) ಅವರನ್ನು ಕೊಲೆ ಮಾಡಿರುವ ಆರೋಪಿ ಚಿಕ್ಕಮೊಗ (45), ಕೃತ್ಯದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣನಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

‘ಮೃತ ರಮ್ಯಾ, ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಚಿಕ್ಕಮೊಗ, ಭದ್ರತಾ ಸಿಬ್ಬಂದಿ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪತಿ ತೊರೆದಿದ್ದ ರಮ್ಯಾ, ಚಿಕ್ಕಮೊಗ ಜೊತೆ ಒಂದೇ ಮನೆಯಲ್ಲಿ ವಾಸವಿದ್ದರು. ಆರೋಪಿಗೂ ಮದುವೆಯಾಗಿತ್ತು. ಆತನೂ ಪತ್ನಿ ತೊರೆದಿದ್ದ’ ಎಂದೂ ಮೂಲಗಳು ತಿಳಿಸಿವೆ.

‘ರಮ್ಯಾ ಅವರ ಮೊಬೈಲ್‌ಗೆ ಚಿಕ್ಕಮೊಗ ಕರೆ ಮಾಡಿದ್ದರು. ಅದನ್ನು ಸ್ವೀಕರಿಸಿರಲಿಲ್ಲ. ಅದೇ ಸಿಟ್ಟಿನಲ್ಲೇ ಮನೆಗೆ ಬಂದಿದ್ದ ಆರೋಪಿ, ಜಗಳ ತೆಗೆದಿದ್ದ. ಅಕ್ಕ–ಪಕ್ಕದ ನಿವಾಸಿಗಳು, ವಿಚಾರಿಸಲು ಬಂದಾಗ ಅವರಿಗೆ ಬೈದು ಮನೆಯಿಂದ ವಾಪಸು ಕಳುಹಿಸಿದ್ದ. ನಂತರ ಮಾರಕಾಸ್ತ್ರದಿಂದ ಹೊಡೆದು ರಮ್ಯಾ ಅವರನ್ನು ಕೊಂದಿದ್ದ. ಬಳಿಕ, ತಾನೂ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು