ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠ ಪ್ರಕರಣ ಮಕ್ಕಳ ಆಯೋಗದಿಂದಲೂ ತನಿಖೆ: ನಾಗಣ್ಣ ಗೌಡ

Last Updated 12 ಡಿಸೆಂಬರ್ 2022, 12:44 IST
ಅಕ್ಷರ ಗಾತ್ರ

ಕೋಲಾರ: ‘ಚಿತ್ರದುರ್ಗದ ಮುರುಘಾ ಮಠದಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ‌ ಆಯೋಗದಿಂದಲೂ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಕರಣ ಏಕೆ ತಡವಾಗಿ ಬೆಳಕಿಗೆ ಬಂತು? ಘಟನೆ ನಡೆದಾಗ ಡಿವೈಎಸ್ಪಿ ಯಾರಿದ್ದರು, ಅಧಿಕಾರಿಗಳು ಯಾರಿದ್ದರು? ಮಠದಲ್ಲಿನ ಅಧಿಕಾರಿಗಳು ಏಕೆ ಇಷ್ಟು ವರ್ಷ ಮುಚ್ಚಿಟ್ಟಿದ್ದರು? ಪೊಲೀಸರು ಏಕೆ ವಿಫಲರಾದರು, ಕ್ರಮ ವಹಿಸಲು ಉಂಟಾದ ಅಡೆತಡೆ ಏನು ಎಂಬಿತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಈಗಾಗಲೇ ಹಲವರ ಮೇಲೆ ಕ್ರಮವೂ ಆಗಿದೆ’ ಎಂದರು.

‘ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಆತನಿಗೆ ಶಿಕ್ಷೆ ಆಗಲೇಬೇಕು. ಇಂಥ ಘಟನೆ ನಡೆದಾಗ ಸಮಾಜ ಹೆದರಬಾರದು. ಮಕ್ಕಳನ್ನು ಕಳೆದುಕೊಂಡು ಸಮಾಜ ಕಟ್ಟುವುದೇನಿದೆ? ಮಕ್ಕಳ ಜೀವ ತೆಗೆಯಲು ಹಾಗೂ ಅವರ ಜೀವನ ಅಳಿಸಲು ಯಾರಿಗೂ ಅಧಿಕಾರ ಇಲ್ಲ. ಬೇಗನೇ ಪತ್ತೆ ಹಚ್ಚಿದ್ದರೆ ಮಠವೂ ಉಳಿಯುತಿತ್ತು, ಮಕ್ಕಳಿಗೂ ತೊಂದರೆ ಆಗುತ್ತಿರಲಿಲ್ಲ. ಈಗ ಎಲ್ಲಾ ಸೇರಿ ಮುಳುಗಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT