ಶನಿವಾರ, ಜನವರಿ 28, 2023
15 °C
ಮಾಜಿ ಸಚಿವೆ ರಾಣಿ ಸತೀಶ್‌ ಹಾಗೂ ಮಹಡಿ ಶಿವಮೂರ್ತಿ ಸಂಭಾಷಣೆಯ ಆಡಿಯೊ ವೈರಲ್‌

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ: ಫೋನ್‌ ಸಂಭಾಷಣೆಯ ಆಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾಶ್ರೀ ಬಂಧನಕ್ಕೆ ಒಳಗಾಗಿರುವುದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವೆ ರಾಣಿ ಸತೀಶ್‌ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ ನಡುವೆ ನಡೆದ ಫೋನ್‌ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸುಮಾರು 12 ನಿಮಿಷದ ಮಾತುಕತೆಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬಂದಿವೆ. ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಆಕ್ರೋಶ, ಯಡಿಯೂರಪ್ಪ ಸೇರಿದಂತೆ ಇತರ ರಾಜಕಾರಣಿಗಳು ಮಠದಲ್ಲಿಟ್ಟ ಹಣದ ಬಗ್ಗೆಯೂ ಪ್ರಸ್ತಾಪವಾಗಿದೆ.

‘ಮುರುಘಾಶ್ರೀ ಪ್ರಕರಣ ಅಸಹ್ಯ ಮೂಡಿಸಿದೆ. ಜೈಲಿನಲ್ಲಿದ್ದರೂ ಮಠ ಇನ್ನೂ ಅವರ ಹಿಡಿತದಲ್ಲಿದೆ. ಭಯ, ಲಜ್ಜೆ ಇಲ್ಲದ ವರ್ತನೆ ಇದು. ವೀರಶೈವರಿಂದ ಮಠ ಕೈತಪ್ಪುವ ಆತಂಕ ಎದುರಾಗಿದೆ. ವೀರಶೈವ ಲಿಂಗಾಯತ ಮಹಾಸಭಾ ಈ ಸಂಬಂಧ ಧ್ವನಿ ಎತ್ತಬೇಕು.
ಮಠಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಬೇಕಿದೆ’ ಎಂದು ರಾಣಿ ಸತೀಶ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಆಡಿಯೊ ಸಂಭಾಷಣೆಯು ರಾಣಿ ಸತೀಶ್‌ ಹಾಗೂ ತಮ್ಮ ನಡುವೆ ನಡೆದಿರುವುದೇ ಆಗಿದೆ ಎಂದು ಮಹಡಿ ಶಿವಮೂರ್ತಿ ಖಚಿತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು