ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ನಿಷೇಧಾಜ್ಞೆ ನಡುವೆ ದಸರೆಗೆ ಚಾಲನೆ ಇಂದು

Last Updated 6 ಅಕ್ಟೋಬರ್ 2021, 20:05 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ ಕಾಲಘಟ್ಟದ ಎರಡನೇ ದಸರಾದಲ್ಲಿ ಜನಸಂಭ್ರಮ ಇಲ್ಲ. ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ನಡುವೆಯೇ ಸರಳ, ಸಾಂಪ್ರದಾಯಿಕ ಉತ್ಸವಕ್ಕೆ ಗುರುವಾರ ಚಾಲನೆ ದೊರಕಲಿದೆ. ಆದರೆ, ಜನ ಬರುವಂತಿಲ್ಲ. ಹೀಗಾಗಿ, ಬಹಳ ಮಂದಿ ‘ನೆನಪಿನ ದಸರೆಯೇ ಚೆನ್ನ’ ಎನ್ನುತ್ತಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ 1ಕ್ಕಿಂತ ಕಡಿಮೆ ಇದೆ. ಆದರೂ, ರಾಜ್ಯ ಸರ್ಕಾರ ಅಳೆದೂ ತೂಗಿ ಹಲವು ನಿರ್ಬಂಧಗಳೊಂದಿಗೆ ಹೊರಡಿಸಿರುವ ಮಾರ್ಗಸೂಚಿಯಂತೆ ಉತ್ಸವ ನಡೆಯಲಿದೆ. ಹೀಗಾಗಿ, ಎಲ್ಲ ಕಾರ್ಯಕ್ರಮಗಳನ್ನೂ ವರ್ಚುವಲ್ ಪರದೆಯಲ್ಲಿ ನೋಡಿ ಆನಂದಿಸಬೇಕಾದ ಅನಿರ್ವಾಯ ಪರಿಸ್ಥಿತಿ. ಸಾಮಾನ್ಯರಿಗೆ ಉತ್ಸವ ಈ ಬಾರಿಯೂ ದೂರ ದರ್ಶನವಷ್ಟೇ.

ಅರಮನೆಯ ಜೊತೆಗೆ ನಗರದ ಪಾರಂಪರಿಕ ಕಟ್ಟಡಗಳು, ವೃತ್ತ, ರಸ್ತೆಗಳು ಸೇರಿ ಈ ಬಾರಿ 100 ಕಿ.ಮೀ ವಿಸ್ತೀರ್ಣದಲ್ಲಿ ಅಳವಡಿಸಿರುವ ದೀಪಾಲಂಕಾರದಲ್ಲಿ ಇಡೀ ನಗರ ಝಗಮಗಿಸುತ್ತಿದೆ. ಅದನ್ನು ಹೊರತುಪಡಿಸಿದರೆ, ವೈವಿಧ್ಯಮಯ ಕಾರ್ಯಕ್ರಮಗಳಿಲ್ಲದೆ ಆಚರಣೆಗೆ ಮಂಕು ಕವಿದಿದೆ. ಉತ್ಸವ ಉದ್ಘಾಟನೆಯಾಗುತ್ತಿರುವ ಹೊತ್ತಿನಲ್ಲೂ ರಸ್ತೆ ದುರಸ್ತಿ ಕೆಲಸ ನಡೆದೇ ಇದೆ.

ಅರಮನೆ, ಕಲಾಮಂದಿರ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ಗುಡಿಯಲ್ಲಷ್ಟೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜವಂಶಸ್ಥರ ಖಾಸಗಿ ದರ್ಬಾರ್ ವೀಕ್ಷಿಸಲು ಈ ಬಾರಿ ಸಂಬಂಧಿಕರು ಮತ್ತು ಮಾಧ್ಯಮದವರಿಗೂ ಅವಕಾಶವಿಲ್ಲ. ಜನಪ್ರಿಯವಾದ ರೈತ ದಸರಾ, ಯುವ ದಸರಾ, ವಜ್ರಮುಷ್ಟಿ ಕಾಳಗ, ಕ್ರೀಡಾಕೂಟ, ಕುಸ್ತಿ ಪಂದ್ಯಾವಳಿ, ಪಂಜಿನ ಕವಾಯತನ್ನು ಪಕ್ಕಕ್ಕೆ ಸರಿಸಲಾಗಿದೆ.

***

ಕೋವಿಡ್‌ ಸಂದರ್ಭದಲ್ಲೂ ದಸರೆ ನಡೆದಿದೆ. ಸಾರ್ವಜನಿಕರು ದೊಡ್ಡಪ್ರಮಾಣದಲ್ಲಿ ಬರಬೇಕೆಂಬುದು ಮನಸ್ಸಿನಲ್ಲಿದೆ. ಆ ದಿನಗಳೂ ಬರಲಿವೆ

–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT