ಮಂಗಳವಾರ, ನವೆಂಬರ್ 29, 2022
29 °C

ಸರ್ಕಾರದಿಂದ ಕಾಟಾಚಾರದ ದಸರಾ ಆಚರಣೆ: ಕಾಂಗ್ರೆಸ್‌ ವಾಗ್ದಾಳಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಆಗಿರುವ ಎಡವಟ್ಟುಗಳ ವಿಚಾರವಾಗಿ ರಾಜ್ಯ ಸರ್ಕಾರವನ್ನು ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದೆ. 

ಈ ಕುರಿತು ‘ಪ್ರಜಾವಾಣಿ’ ವರದಿಯನ್ನು ಟ್ವೀಟ್‌ ಮಾಡಿರುವ ಕೆಪಿಸಿಸಿ, ‘ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರ ಒಂದನ್ನು ಬಿಟ್ಟು ಬೇರೆ ಯಾವುದನ್ನೂ ಮಾಡಲು ಬರುವುದಿಲ್ಲ’ ಎಂದು ಹರಿಹಾಯ್ದಿದೆ.
 
‘ದಸರಾ ಕವಿಗೋಷ್ಠಿಯಲ್ಲಿ ಸತ್ತವರ ಹೆಸರನ್ನು ಸೇರಿಸಲಾಗಿದೆ. ಸಮ್ಮತಿ ಪಡೆಯದೆ ಹೆಸರನ್ನು ಸೇರಿಸಲಾಗಿದೆ’ ಎಂದು ಟ್ವೀಟಿಸಿದೆ.
 
‘ಅತ್ತ ಕ್ರೀಡಾಕೂಟಕ್ಕೂ ಅನುದಾನವಿಲ್ಲ, ಇತ್ತ ಕವಿಗೋಷ್ಠಿಯೂ ಸರಿ ಇಲ್ಲ. ಸರ್ಕಾರ ಕಾಟಾಚಾರದ ದಸರಾ ಆಚರಣೆ ಮಾಡುತ್ತಿರುವುದು ಸ್ಪಷ್ಟ’ ಎಂದು ಕೆಪಿಸಿಸಿ ಟೀಕಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು