ಶನಿವಾರ, ಅಕ್ಟೋಬರ್ 23, 2021
24 °C
ಕೋವಿಡ್‌ನಿಂದ ಆದಾಯ ಕುಸಿತ–ಪ್ರವಾಸಿಗರ ಮೇಲೆ ಹೊರೆ

ಮೈಸೂರು: ಅರಮನೆ ಪ್ರವೇಶ ಶುಲ್ಕ ₹100ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಾಡಹಬ್ಬ ದಸರೆಗೆ ಚಾಲನೆ ದೊರಕಲು ಕೇವಲ 12 ದಿನವಿರುವಾಗ ಮೈಸೂರು ಅರಮನೆ ಪ್ರವೇಶ ಶುಲ್ಕವನ್ನು ₹ 70ರಿಂದ 100ಕ್ಕೆ ಹೆಚ್ಚಿಸಲಾಗಿದೆ. ಒಂದೂವರೆ ವರ್ಷದಿಂದ ಕೋವಿಡ್‌ ಕಾರಣ ಆದಾಯ ಕುಸಿದಿದ್ದರಿಂದ ಅರಮನೆ ಮಂಡಳಿಯು ಈ ಕ್ರಮ ಕೈಗೊಂಡಿದ್ದು ಪ್ರವಾಸಿಗರ ಮೇಲೆ ಹೊರೆ ಬಿದ್ದಿದೆ.

ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿಯೂ ಪ್ರವೇಶ ಶುಲ್ಕ ₹ 100 ಇರಲಿದೆ. ವಿದೇಶೀಯರಿಗೂ ಇಷ್ಟೇ ದರ ನಿಗದಿಪಡಿಸಲಾಗಿದೆ. 18 ವರ್ಷದೊಳಗಿನ ಮಕ್ಕಳಿಗೆ ₹ 50 ಶುಲ್ಕ ವಿಧಿಸಲು ನಿರ್ಧರಿಸಿದೆ.

‘ಪ್ರವೇಶ ಶುಲ್ಕದಿಂದಲೇ ನಿರ್ವಹಣೆ, ಸಿಬ್ಬಂದಿ ವೇತನ ಹಾಗೂ ಇತರೆ ಖರ್ಚು ಭರಿಸಲಾಗುತ್ತಿದೆ. ಕೋವಿಡ್‌ನಿಂದಾಗಿ ಪ್ರವಾಸಿಗರ ಸಂಖ್ಯೆ ಕುಸಿದಿದ್ದು, ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ನಿರ್ವಹಣೆಗೆ ಪ್ರತಿ ತಿಂಗಳು ₹ 30 ಲಕ್ಷ ವೆಚ್ಚವಾಗುತ್ತದೆ. ಹಾಗೆಯೇ, ಅರಮನೆ ದೀಪಾಲಂಕಾರ ಸೇರಿ ವಿದ್ಯುತ್‌ ಶುಲ್ಕವೇ ತಿಂಗಳಿಗೆ ₹ 10 ಲಕ್ಷವಾಗುತ್ತದೆ’ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಅರಮನೆಯಲ್ಲಿ ಆಯೋಜಿಸುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೀಕ್ಷಣೆಗೂ ಶುಲ್ಕ ಹೆಚ್ಚಿಸಲಾಗಿದೆ. ಕನ್ನಡದ ಕಾರ್ಯಕ್ರಮಕ್ಕೆ ವಯಸ್ಕರಿಗೆ ₹ 90, ಮಕ್ಕಳಿಗೆ ₹ 40 (ಸೋಮವಾರದಿಂದ ಬುಧವಾರ) ಇಂಗ್ಲಿಷ್ ಕಾರ್ಯಕ್ರಮಕ್ಕೆ ವಯಸ್ಕರಿಗೆ ₹ 120, ಮಕ್ಕಳಿಗೆ ₹ 50 (ಗುರುವಾರದಿಂದ ಶನಿವಾರ) ನಿಗದಿ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು